ಶಿಸ್ತು, ಜ್ಞಾನದ ಪ್ರತಿಬಿಂಬವೇ ಗುರು

11kittur1
Published on

ಚನ್ನಮ್ಮನ ಕಿತ್ತೂರು: ಭಾರತೀಯ ಸಂಸ್ಕೃತಿಯಲ್ಲಿ ಶಿಸ್ತು, ಶ್ರದ್ಧೆ, ಜ್ಞಾನದ ಪ್ರತಿಬಿಂಬವಾಗಿ ಗುರು ಗೌರವಿಸಲ್ಪಡುತ್ತಾನೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದ ಶ್ರೀ ಸಾಯಿ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 6ನೇ ವರ್ಷದ ಶ್ರೀ ಸಾಯಿಗುರು ಪೂರ್ಣಿಮೆ ಉತ್ಸವ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಭಾರತೀಯರು ತಂದೆ-ತಾಯಿಯಂತೆ ಗುರುಗಳಿಗೆ ಶ್ರೇಷ್ಠ ಸ್ಥಾನ ಕೊಡುತ್ತಾರೆ. ಅವರ ಆರಾಧನೆಗೆಂದೇ ಗುರುಪೂರ್ಣಿಮೆ ಆಚರಿಸಲಾಗುತ್ತದೆ. ಮಂದಿರಕ್ಕೆ ಬೇಕಾದ ಸಹಕಾರ ನೀಡುವ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಗುರು ಎಂದೆನಿಸಿದವರು ಎಲ್ಲವನ್ನು ತ್ಯಜಿಸಿ ತನ್ನಲ್ಲಿದ್ದ ವಿದ್ಯೆ ಇನ್ನೊಬ್ಬರಿಗೆ ನೀಡುವವನು ಮತ್ತು ಕಷ್ಟ ಕಾಲದಲಿದ್ದವರಿಗೆ ಸಹಾಯ ಮಾಡುವವರೇ ಗುರು ಎನಿಸಿಕೊಳ್ಳುತ್ತಾರೆ ಎಂದರು.

ಕಸಾಪ ಅಧ್ಯಕ್ಷ ಎಸ್.ಬಿ. ದಳವಾಯಿ ಪ್ರಾಸ್ತಾವಿಕ ಮಾತನಾಡಿದರು. ರುದ್ರಾಭಿಷೇಕ, ಮಂಗಳಾರತಿ, ಅನ್ನಪ್ರಸಾದ ನೆರವೇರಿತು. ಭಕ್ತರು ನೈವೇದ್ಯ ಅರ್ಪಿಸಿದರು. ಈಶ್ವರ ಗಡಿಬಿಡಿ ಹಾಗೂ ವಿವಿಧ ಮಹಿಳಾ ತಂಡವರಿಂದ ಭಜನೆ, ಭಕ್ತಿಗೀತೆಗಳು ಏರ್ಪಟ್ಟವು.

ರವೀಂದ್ರ ಜಕಾತಿ, ಬಾಬು ಒಳಸಂಗ, ಸುಮಂಗಲಾ ಜಕಾತಿ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಅಕ್ಷಯ ಜಕಾತಿ, ಸಾಹಿತಿ ರಾಜಶೇಖರ ಕೋಟಿ, ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಸುರೇಶ ಜೋರಾಪುರ, ಚಲನಚಿತ್ರ ನಟಿ ಡಾ. ಶ್ರೀಮತಿ ಪಂಕಜ, ದಿನೇಶ ಒಳಸಂಗ, ಅಜಯ ಕಲ್ಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net