

ವಿಜಯಪುರ: ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಳ್ಳಬೇಕು. ಗುರಿ ಸಾಧನೆಗೆ ಶಿಸ್ತು ಮತ್ತು ಆತ್ಮವಿಶ್ವಾಸ ಅತೀ ಮುಖ್ಯ ಎಂದು ಇಸ್ರೋ ವಿಜ್ಞಾನಿ ಅಭಿಷೇಕ ದೇಶಪಾಂಡೆ ಹೇಳಿದರು.ನಗರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ಗುರುವಾರ ನಡೆದ ವಿದ್ಯಾವರ್ಧಕ ಸಂದ ವಿ.ಭ. ದರಬಾರ ಪದವಿ ಪೂರ್ವ ಕಾಲೇಜಿನ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗದ 2024&25ನೇ ಸಾಲಿನ ಶೈಕ್ಷಣಿಕ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂದ ಉಪಾಧ್ಯಕ್ಷ ಕೆ.ಜಿ. ದೇಶಪಾಂಡೆ ಮಾತನಾಡಿ, ಗುರಿ ಸಾಧಿಸಲು ಶಿಸ್ತಿನ ಜತೆಗೆ ಸಾಧನೆಗೆ ಸೂಕ್ತ ಯೋಜನೆ ರೂಪಿಒಸಿಕೊಳ್ಳಬೇಕು. ಅಲ್ಲದೆ, ಅದನ್ನು ಕಾರ್ಯರೂಪಕ್ಕೆ ತರುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಆಡಳಿತ ಮಂಡಳಿ ಸದಸ್ಯ ವಿಕಾಸ ಕೆ. ದರಬಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಸಾಧನೆ ಇಲ್ಲಿಗೆ ಕೊನೆಯಾಗದೆ, ಅದು ತಮ್ಮ ಭವಿಷ್ಯದ ಯಶಸ್ಸಿಗೆ ಮೊದಲ ಮೆಟ್ಟಿಲವಾಗಲಿ ಎಂದು ಶುಭ ಜಾರೈಸಿದರು.
ಉಪ&ಪ್ರಾಚಾರ್ಯ ವಿ.ಆರ್. ಕುಲಕರ್ಣಿ ಮತ್ತಿತರರಿದ್ದರು.
ವಿಜಯಪುರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ಗುರುವಾರ ನಡೆದ ವಿದ್ಯಾವರ್ಧಕ ಸಂದ ವಿ.ಭ. ದರಬಾರ ಪದವಿ ಪೂರ್ವ ಕಾಲೇಜಿನ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗದ 2024&25ನೇ ಸಾಲಿನ ಶೈಕ್ಷಣಿಕ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಇಸ್ರೋ ವಿಜ್ಞಾನಿ ಅಭಿಷೇಕ ದೇಶಪಾಂಡೆ ಮಾತನಾಡಿದರು. ವಿಕಾಸ ಕೆ. ದರಬಾರ, ಉಪ&ಪ್ರಾಚಾರ್ಯ ವಿ.ಆರ್. ಕುಲಕರ್ಣಿ ಇತರರಿದ್ದರು.