

ಹುಬ್ಬಳ್ಳಿ : ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಒಂದಾದ ನೀಟ್ (ವೈದ್ಯಕೀಯ ಪ್ರವೇಶ ಪರೀಕ್ಷೆ) ಯಶಸ್ಸು ಪಡೆಯಲು ನಿರಂತರ ಕಠಿಣ ಪರಿಶ್ರಮ, ಸತತ ಅಧ್ಯಯನಶೀಲತೆ, ಕರಾರುವಾಕ್ ಅಭ್ಯಾಸಕ್ರಮ ಮಹತ್ವಪೂರ್ಣವಾಗಿದೆ ಎಂದು ಚೌಗಲಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅನಿಲಕುಮಾರ ಚೌಗಲಾ ಹೇಳಿದರು.
ಇಲ್ಲಿನ ವಿದ್ಯಾನಗರದ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ನೀಟ್ ಅಕಾಡೆಮಿಯಲ್ಲಿ ಶುಕ್ರವಾರ ಆಯೋಜಿಸಿದ್ದ 2024-25 ನೇ ಸಾಲಿನ ನೀಟ್ ವೈದ್ಯಕೀಯ ಕೋರ್ಸ್ ಪರೀಕ್ಷೆಯ ತರಬೇತಿ ಲಾಂಗಟಮ್ರ್ ಅಥವಾ ರಿಪೀಟರ್ಸ್ ಬ್ಯಾಚ್ ತರಬೇತಿ ವರ್ಗಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳಿಗೆ ಉತ್ಕೃಷ್ಟವಾದ ಸಿದ್ಧತೆ ತುಂಬ ಅಗತ್ಯ. ಅತ್ಯಂತ ಎತ್ತರವಾದ ಗುರಿಗೆ ಅತಿ ಹೆಚ್ಚಿನ ಪ್ರಯತ್ನ ಅವಶ್ಯಕ ಎಂದು ಹೇಳಿದರು.
ವಿದ್ಯಾರ್ಥಿಗಳು ಅಧ್ಯಯನಶೀಲರಾಗುವುದರೊಂದಿಗೆ ದೃಢ ಸಂಕಲ್ಪ, ಗುರಿ ಹಾಗೂ ನಿರಂತರ ಪ್ರಯತ್ನ ಮಾಡಿದರೆ ಪರೀಕ್ಷೆಯಲ್ಲಿ ಯಶಸ್ಸು ಖಂಡಿತ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳ ಗರಿಷ್ಠ ಸಾಧನೆಯ ಕೇಂದ್ರ ಬಿಂದು ಎನಿಸಿಕೊಂಡಿರುವ ಈ ಸಂಸ್ಥೆಯಲ್ಲಿ ಕಲಿಯುತ್ತಿರಯವ ಮಕ್ಕಳು ಪ್ರಥಮ ಬಾರಿಯ ಪರೀಕ್ಷೆಗಿಂತ ನೀಟ್ ಕೋಚಿಂಗ್ ಬಳಿಕ ಹೆಚ್ಚಿನ ಅಂಕ ಪಡೆದುಕೊಳ್ಳುತ್ತಿರುವುದು ಇಲ್ಲಿನ ಕೋಚಿಂಗ್ನ ಗುಣಮಟ್ಟಕ್ಕೆ ಸಾಕ್ಷಿ. ನೀಟ್ ಪರೀಕ್ಷೆ ಎದುರಿಸಲು ಪೂರಕ ವಾತಾವರಣ, ಸೌಲಭ್ಯ, ಗ್ರಂಥಾಲಯ, ದೈನಂದಿನ, ಸಾಪ್ತಾಹಿಕ ಹಾಗೂ ಅಣುಕು ಪರೀಕ್ಷೆಗಳು, ಪಾಠ ನಂತರ ಪುನರಾರ್ವನೆ ಪ್ರಾಧ್ಯಾಪಕರ ನಿರೀಕ್ಷಣೆಯಲ್ಲಿ ಅಧ್ಯಯನ ಅವಧಿ ತುಂಬ ವ್ಯವಸ್ಥಿತವಾಗಿದೆ ಮತ್ತು ಹಾಸ್ಟೆಲ್ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಸಮರ್ಪಣಾಭಾವದ ಪ್ರೇರಕ ಅಧ್ಯಾಪಕರು ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ನೀಟ್ ಪರೀಕ್ಷೆಗಾಗಿ ಸಿದ್ಧತೆಗೊಳಿಸುತ್ತಿದ್ದಾರೆ. ವಿದ್ಯಾರ್ಥಿಗಳ ವೈದ್ಯಕೀಯ ವಿದ್ಯಾಭ್ಯಾಸದ ಕನಸನ್ನು ನನಸಾಗಿಸುವಲ್ಲಿ ವಿದ್ಯಾನಿಕೇತನ ನೀಟ್ ಲಾಂಗ್ ಟಮ್ರ್ ಕೋಚಿಂಗ್ ಆಶಾಕಿರಣವಾಗಿದೆ ಎಂದರು.
ಅತ್ಯ
ಅನುಭವ ಹಂಚಿಕೊಂಡ ಅತ್ಯಧಿಕ ಅಂಕ ಪಡೆಯುವ ಸಂಭವನಿಯ ವಿದ್ಯಾರ್ಥಿಗಳು, ಇಲ್ಲಿರುವ ಶಿಕ್ಷಕರ ನೀಡುವ ಅತ್ಯುತ್ತಮ ತರಬೇತಿಯು ಅತ್ಯಧಿಕ ಅಂಕ ಪಡೆಯಲು ಸಾಧ್ಯವಾಯಿತು ಎಂದರು. ಬೇರೆ ಜಿಲ್ಲೆಗಳಿಂದ ಆಗಮಿಸಿರುವ ವಿದ್ಯಾರ್ಥಿಗಳ ಪಾಲಕರು ಮಾತನಾಡಿ, ತಮ್ಮ ಮಕ್ಕಳ ಯಶಸ್ಸಿಗೆ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಅಧ್ಯಕ್ಷೆ ಶ್ರೀದೇವಿ ಅನಿಲಕುಮಾರ ಚೌಗಲಾ ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆ ಕಿತ್ತೆಸೆದು ಧೈರ್ಯದಿಂದ ಮುನ್ನುಗ್ಗಬೇಕು. ಪಿಯು ದ್ವಿತೀಯ ಪರೀಕ್ಷೆಯಲ್ಲಿ ಕಳೆದ 15 ವರ್ಷಗಳಿಂದ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಈ ಬಾರಿ ರಾಜ್ಯಕ್ಕೆ ಪ್ರಥಮ ರ್ಯಾಂಕ್, ರಾಜ್ಯದ ಟಾಪ್ 10 ರ್ಯಾಂಕ್ಗಳಲ್ಲಿ ನಮ್ಮ 15 ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದಕ್ಕೆ ನಮ್ಮ ಸಿಬ್ಬಂದಿಯಲ್ಲಿ ಇರುವ ಬದ್ಧತೆ ಹಾಗೂ ತರಬೇತಿಯಿಂದ ಸಾಧ್ಯವಾಗಿದೆ ಎಂದರು.
ವಾರ್ಷಿಕ ಕ್ರಿಯಾಯೋಜನೆಯ ರೂಪ ರೇಷೆಯನ್ನು ಪ್ರಸ್ತುತ ಪಡಿಸಲಾಯಿತು. ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಸಿಬ್ಬಂದಿ, ರಾಜ್ಯದ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.