ಮಾರ್ಗಸೂಚಿ ಪಾಲಿಸದಿದ್ದರೆ ಶಿಸ್ತು ಕ್ರಮ

ಹನೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಸಂಬಂಧ ಇನ್ಸ್‌ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು ಜಾಗೃತಿ ಜಾಥಾ ನಡೆಸಿದರು. ಮಂಜುನಾಥ್ ಪ್ರಸಾದ್, ರಾಘವೇಂದ್ರ, ವಿಶ್ವನಾಥ್ ಇತರರು ಇದ್ದರು.
ಹನೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಸಂಬಂಧ ಇನ್ಸ್‌ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು ಜಾಗೃತಿ ಜಾಥಾ ನಡೆಸಿದರು. ಮಂಜುನಾಥ್ ಪ್ರಸಾದ್, ರಾಘವೇಂದ್ರ, ವಿಶ್ವನಾಥ್ ಇತರರು ಇದ್ದರು.
Published on

ಹನೂರು: ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಗಣೇಶ ಮೂರ್ತಿಯನ್ನು ನಿಗದಿತ ಸ್ಥಳದಲ್ಲಿ ವಿಸರ್ಜಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇನ್ಸ್‌ಪೆಕ್ಟರ್ ಶಶಿಕುಮಾರ್ ಎಚ್ಚರಿಸಿದರು.

ವಿವಿಧೆಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಹಿನ್ನಲೆಯಲ್ಲಿ ಭಾನುವಾರ ಪಟ್ಟಣದ ವಿವಿಧ ಬಡಾವಣೆಗಳಿಗೆ ಪೊಲೀಸ್ ಸಿಬ್ಬಂದಿಯೊಂದಿಗೆ ತೆರಳಿ ಜಾಗೃತಿ ಜಾಥಾ ನಡೆಸಿ ಮಾತನಾಡಿದರು.

ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಏಕ ಗವಾಕ್ಷಿ ಸಮಿತಿಯಿಂದ ಅನುಮತಿ ಪಡೆದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಾಗಾಗಿ ಇದರ ಜವಬ್ದಾರಿ ಹೊತ್ತವರು ಗಣೇಶ ಮೂರ್ತಿ ವಿಸರ್ಜನೆವರೆಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಯಾವುದೇ ಗಲಾಟೆಗೆ ಆಸ್ಪದ ನೀಡದಂತೆ ನೋಡಿಕೊಳ್ಳುವ ಮೂಲಕ ಶಾಂತಿ, ಸುವ್ಯವಸ್ಥೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮೂರ್ತಿ ವಿಸರ್ಜನಾ ವೇಳೆ ಹೆಚ್ಚು ಶಬ್ದ ಹೊರಸೂಸುವ ಧ್ವನಿವರ್ಧಕವನ್ನು ಬಳಕೆ ಮಾಡಬಾರದು. ಜತೆಗೆ ಮದ್ಯ ಸೇವನೆ ಮಾಡುವಂತಿಲ್ಲ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ನ್ಯಾಯಾಲಯದ ಆದೇಶದಂತೆ ಮೂರ್ತಿಯನ್ನು ಕೆರೆ-ಕಟ್ಟೆಗಳಲ್ಲಿ ವಿಸರ್ಜಿಸಬಾರದು. ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿರುವ ಸ್ಥಳದಲ್ಲೇ ವಿಸರ್ಜಿಸಬೇಕು. ಒಂದು ವೇಳೆ ಮಾರ್ಗಸೂಚಿಯನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಪ್ರಸಾದ್, ಎಎಸೈ ಪುಟ್ಟಸ್ವಾಮಿ, ಕೃಷ್ಣ, ಪೇದೆಗಳಾದ ರಾಘವೇಂದ್ರ, ಮೂರ್ತಿ, ಶಿವು, ವಿಶ್ವನಾಥ್, ಕಾಮರಾಜು, ಪ್ರಭು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net