ನಿಯಮ ಉಲ್ಲಂಘಿಸಿದರೆ ನಿರ್ಧಾಣ್ಯ ಕ್ರಮ

ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿದ್ದವರಿಗೆ ಮತ್ತು ಅಪ್ರಾಪ್ತರಿಗೆ ಪೊಲೀಸರು ದಂಡ ವಿಧಿಸಿದರು.
Niyama Ullanghisidare Nirdhakshinya Krama
Published on

ಬಾಗೇಪಲ್ಲಿ ಪಟ್ಟಣದಲ್ಲಿ ಪೊಲೀಸ್​ ವೃತ್ತ ನಿರೀಕ್ಷಕ ಸಿ.ರವಿಕುಮಾರ್​ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಸಂಚಾರಿ ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು ಹಾಗೂ ಚಲಾಯಿಸುವುದು ಅಪರಾಧವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ಧಾಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್​ ವೃತ್ತ ನಿರೀಕ್ಷಕ ಸಿ.ರವಿಕುಮಾರ್​ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂನೆ ಮಾಡುವ ವಾಹನ ಸವಾರರಿಗೆ ದಂಡ ವಿಧಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಸರಕು ಸಾಗಾಣಿಕೆ, ಕಾರು, ಆಟೋ, ದ್ವಿಚಕ್ರ ವಾಹನಗಳನ್ನು ಮನಬಂದಂತೆ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದು, ಪಟ್ಟಣದ ಮುಖ್ಯರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆ, ಪುರಸಭೆ ಕಾರ್ಯಲಯ, ತಾಲೂಕು ಕಚೇರಿ ಮುಂಭಾಗ, ಸಾರಿಗೆ ಸಂಸ್ಥೆ ಬಸ್​ ನಿಲ್ದಾಣ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕೆನರಾ ಬ್ಯಾಂಕ್​ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವವರಿಗೆ ದಂಡ ಹಾಕಿ ಅರಿವು ಮೂಡಿಸಲಾಗುತ್ತಿದೆ ಎಂದರು.
ುಟ್​ಪಾತ್​ ಅಂಗಡಿಗಳ ಮಾಲೀಕರು ನಡುರಸ್ತೆಯಲ್ಲಿ ತಳ್ಳುವ ಗಾಡಿಗಳನ್ನು ನಿಲ್ಲಿಸಿಕೊಂಡು ಕಬಾಬ್​, ಪಾನಿಪುರಿ, ಟಿಪನ್​ ಹಾಗೂ ತರಕಾರಿ ಮಾರಾಟ ಮಾಡುತ್ತಿದ್ದಾರೆ. ರಸ್ತೆಯ ಬಹುತೇಕ ಸ್ಥಳವನ್ನು ಅತಿಕ್ರಮಣ ಮಾಡಿ ಇಟ್ಟುಕೊಂಡಿರುವ ಗಾಡಿಗಳಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿ ಹಲವು ಬಾರಿ ಟ್ರಾಫಿಕ್​ ಜಾಮ್​ ಸಮಸ್ಯೆ ಎದುರಾಗಿದೆ. ಆದ್ದರಿಂದ ಪೊಲೀಸ್​ ಇಲಾಖೆ ಸೂಚಿಸಿರುವ ನಿಗದಿತ ಸ್ಥಳದ ಗಡಿರೇಖೆಯೊಳಗೆ ಎಲ್ಲ ಮಾದರಿಯ ವಾಹನಗಳು ಸೇರಿದಂತೆ ುಟ್​ಪಾತ್​ ಅಂಗಡಿಗಳನ್ನು, ತಳ್ಳುವ ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಪೊಲೀಸ್​ ಇಲಾಖೆ ನಿಯಮ ಉಲ್ಲಂಘಿಸಿ ರಸ್ತೆಗೆ ಬರುವ ುಟ್​ಪಾತ್​ ಅಂಗಡಿ, ವಾಹನಗಳನ್ನು ಸೀಜ್​ ಮಾಡಿ ವಾಹನ ಚಾಲಕರ ಹಾಗೂ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಹಲವು ಸ್ಥಳಗಳಲ್ಲಿ ುಟ್​ಪಾತ್​ ಅಂಗಡಿಗಳನ್ನು ತೆರವುಗೊಳಿಸಿ, ಬಿಳಿ ಪಟ್ಟಿಯ ಗಡಿರೇಖೆಯಿಂದ ವಾಹನ ನಿಲ್ದಾಣ ಹಾಗೂ ುಟ್​ಪಾತ್​ ಅಂಗಡಿಗಳ ನಿಲುಗಡೆ ಸ್ಥಳಗಳನ್ನು ಗುರುತಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಇದೇ ವೇಳೆ ಚಾಲನಾ ಪರವಾನಗಿ ಇಲ್ಲದ, ಸೂಕ್ತ ದಾಖಲೆ ಇಲ್ಲದ ಹಾಗೂ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕರಿಗೆ ದಂಡ ವಿಧಿಸಿ ಹಲವರ ವಿರುದ್ಧ ಪ್ರಕರಣ ದಾಖಲಿಸಿದರು.
ಸಬ್​ಇನ್​ಸ್ಪೆಕ್ಟರ್​ ನಾಗಮ್ಮ, ಮುಖ್ಯಪೇದೆ ಮೂರ್ತಿ, ಗೃಹ ರಕ್ಷಕ ಸಿಬ್ಬಂದಿ ಕೃಷ್ಣಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net