ಇಂದು ನಗರ ಗಣಪತಿ ವಿಸರ್ಜನೆ

kldg 12-1 ganesh
ಕಲಾದಗಿಯಲ್ಲಿ ಬುಧವಾರ ನಡೆದ ಪ್ಯಾಟಿ ಬಸವೇಶ್ವರ ಯುವಕ ಮಂಡಳದ ಗಣಪತಿ ವಿಸರ್ಜನೆ ಮೆರವಣಿಗೆ ನಡೆಯಿತು.
Published on

ಕಲಾದಗಿ: ಗಣೇಶನ ಸ್ಥಾಪನೆಯಾದ ಐದನೇ ದಿನ ಬುಧವಾರ ಗ್ರಾಮದ ಹಾಗೂ ಆಸುಪಾಸಿನ ಊರುಗಳಲ್ಲಿ ಬಹುತೇಕ ಸಾರ್ವಜನಿಕ ಮಂಡಳಿಗಳು ಸ್ಥಾಪಿಸಿದ್ದ ಗಣೇನನ್ನು ಸಂಭ್ರಮದಿಂದ ವಿಸರ್ಜಿಸಲಾಯಿತು.

ಮೆರವಣಿಗೆಗೂ ಮುನ್ನ ಎಲ್ಲ ಸಾರ್ವಜನಿಕ ಮಂಡಳಿಗಳ ಬಳಿ ಗಣಪನ ಮೇಲಿದ್ದ ಆಭರಣ, ವಸ, ಹಣ್ಣುಹಂಪಲಗಳ ಹರಾಜು ಪ್ರಕ್ರಿಯೆಯನ್ನು ಸಂಜೆ ಹೊತ್ತಿಗೆ ಮುಗಿಸಿದರು. ಬಳಿಕ ಗಣೇಶೋತ್ಸವ ಮಂಡಳಿಗಳು ರಾತ್ರಿ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದವು.

ಗುಲಾಲಿನ ಪರಸ್ಪರ ಎರೆಚಾಟ, ಪಟಾಕಿಗಳ ಮೊರೆತ, ಬಾನಂಗಳಲ್ಲಿ ಚಿತ್ತಾರ ಮೂಡಿಸಿ ಬೆಳಕಿನ ಪಟಾಕಿಗಳ ಮನೋಹರ ನೋಟ, ಡಿಜೆ ಹಾಡಿನ ಸದ್ದಿಗೆ ಯುವಪಡೆ ಕುಣಿದು ಕುಪ್ಪಳಿಸಿತು. ಮ್ಯುಜಿಕಲ್ ಬ್ಯಾಂಡ್‌ನ ಇಂಪಾದ ಹಾಡುಗಳು, ಜಾಂಜ್ ಮೇಳಗಳ ಹಾಗೂ ಕೋಲಾಟದ ದೃಸ್ಯ ಜನಾಕರ್ಷಿಸಿತು.

ಮಧ್ಯಾಹ್ನ ಪೊಲೀಸ್ ಠಾಣೆ ಸಿಬ್ಬಂದಿ ತಮ್ಮ ಠಾಣೆ ಗಣಪನನ್ನು ವಿಸರ್ಜಿಸಲಾಯಿತು. ಪ್ಯಾಟಿ ಬಸವೇಶ್ವರ ದೇವಸ್ಥಾನ, ಅಡತ ಬಜಾರ, ಬಯಲುರಂಗಮಂದಿರ, ಪಂಚಾಯಿತಿ ಮುಂಭಾಗ, ದಂಡಿನ ಕುರುಬರ ಓಣಿ, ಜನತಾ ಪ್ಲಾಟ್, ಹೆಸ್ಕಾಂ ಕಚೇರಿಗಳಲ್ಲಿ ಸ್ಥಾಪನೆಯಾಗಿದ್ದ ಸಾರ್ವಜನಿಕ ಗಣಪತಿಯನ್ನು ಐದನೇ ದಿನದಂದು ವಿಸರ್ಜಿಸಲಾಯಿತು.

ಮೆರವಣಿಗೆ ಸಂದರ್ಭ ಶಾಂತಿ ಸುವ್ಯವಸ್ಥೆಗಾಗಿ ಸಿಪಿಐ ಎಸ್.ಆರ್. ಪಾಟೀಲ, ಪಿಎಸ್‌ಐಗಳಾದ ಚಂದ್ರಶೇಖರ ಹೆರಕಲ್,ನೂರಜಹಾನ್ ಸಾಬರ ನೇತೃತ್ವದಲ್ಲಿ ಸಿಬ್ಬಂದಿ ಬಿಗಿ ಬಂದೋಬಸ್ತ ಕೈಗೊಂಡಿದ್ದರು.

ಶುಕ್ರವಾರ ಸಂಪನ್ನ
ಏಳನೇ ದಿನ ಶುಕ್ರವಾರ ‘ನಗರ ಗಣಪತಿ’ ಎಂದೇ ಖ್ಯಾತಿಯ ಹೊಸೂರ್ ಚೌಕ್ ಗಣಪತಿ ಹಾಗೂ ಗೋಂದಳಿ ಸಮಾಜದ ಗಣಪತಿಗಳು ವಿಸರ್ಜನೆಯಾಗುವುದರೊಂದಿಗೆ ಈ ಬಾರಿ ಗಣೇಶೋತ್ಸವ ಸಂಪನ್ನವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net