ತಾವರೆಕೆರೆಯಲ್ಲಿ ಗಣಪತಿ ವಿಸರ್ಜನೆ

27 anr 1
ಆಯನೂರಿನ ವಿನಾಯಕ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ನಿಜಲಿಂಗಪ್ಪ, ಶಿವಾನಂದಪ್ಪ, ಲಕ್ಷಿ÷್ಮÃಕಾಂತ ಶೆಟ್ಟಿ, ಕೇಶವನಾಯರ್, ಶಿವಶಂಕರ್ ನಾಯರ್, ಉದಯï ಕುಮಾರ್, ಪ್ರಕಾಶ್ ಮೋಹನ್, ಆನಂದ ಹನುಮಂತ, ಕಾರ್ತಿಕ್, ಚಂದ್ರು ಅಶೋಕ, ಮಹೇಶ್, ಪರಶುರಾಮ ಇತರರಿದ್ದರು.
Published on

ಆಯನೂರು: ಪಟ್ಟಣದ ವಿನಾಯಕ ವೃತ್ತದಲ್ಲಿ ಸರ್ವಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ 57ನೇ ವರ್ಷದ ಗಣಪತಿ ಮೂರ್ತಿ ವಿಸರ್ಜನಾ ಕಾರ್ಯಕ್ರಮವು ಗುರುವಾರ ಗ್ರಾಮದಲ್ಲಿ ರಾಜಬೀದಿ ಉತ್ಸವಗಳೊಂದಿಗೆ ವಿಜೃಂಭಣೆಯಿAದ ನೆರವೇರಿತು.

ಮಧ್ಯಾಹ್ನ 1 ಗಂಟೆಗೆ ಗಣಪತಿ ವಿಸರ್ಜನಾ ಮೆರವಣಿಗೆ ಆರಂಭವಾಯಿತು. ಮೆರವಣಿಗೆಗೆ ಕಮಿಟಿಯ ಗೌರವಾಧ್ಯಕ್ಷ ನಿಜಲಿಂಗಪ್ಪ, ಆಯನೂರು ಶಿವಾನಂದಪ್ಪ, ಲಕ್ಷಿ÷್ಮÃಕಾಂತ ಶೆಟ್ಟಿ, ಮಂಜುನಾಥ ಶೆಟ್ಟಿ, ಶಿವಶಂಕರ ನಾಯರ್, ವಿ.ಜಿ.ಮಹೇಶ್ವರಪ್ಪ, ಕೇಶವನಾಯರ್ ಚಾಲನೆ ನೀಡಿದರು.
ಮೆರವಣಿಗೆ ಆರಂಭದಲ್ಲಿ 101 ತೆಂಗಿನಕಾಯಿಯನ್ನು ಒಡೆಯಲಾಯಿತು. ಮೆರವಣಿಗೆಯು ವಿನಾಯಕ ವೃತ್ತದಿಂದ ಆರಂಭವಾಗಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಪ್ರಾರಂಭವಾಯಿತು. ರಾಷ್ಟಿçÃಯ ಹೆz್ದÁರಿಯಲ್ಲಿ ಸಾಗಿದ ಮೆರವಣಿಗೆ ಚಾಮುಂಡಿಪುರ, ತಾಂಡ, ಸಾಮಿಲï ರಸ್ತೆ, ಬಸ್ ನಿಲ್ದಾಣದ ಹಾರನಹಳ್ಳಿ ರಸ್ತೆ, ಕೋಟೆ ಗ್ರಾಮಕ್ಕೆ ಸಾಗಿ ರಾತ್ರಿ ಪವಿತ್ರ ತಾವರೆಕೆರೆಯಲ್ಲಿ ಗಣಪತಿ ಮೂರ್ತಿಯ ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ಭಜನಾ ತಂಡ, ಡೊಳ್ಳು ಕುಣಿತ, ಬೀದಿ ಆರ್ಕೆಸ್ಟಾç, ಗೊಂಬೆ ಕುಣಿತ, ಹುಲಿ, ಕರಡಿ ಸಿಂಹ ವಿವಿಧ ವೇಷಧಾರಿಗಳು ಗಮನ ಸೆಳೆದವು. ಮಳೆಯನ್ನು ಲೆಕ್ಕಿಸದೆ ಯುವಕರು, ಮಹಿಳೆಯರು ನೃತ್ಯ ಹಾಗೂ ಬೃಹತ್ ಗಾತ್ರದ ಹೂವಿನ ಹಾರ, ಸೇಬಿನ ಹಾರ, ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು. ಸಮಿತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಉದಯಕುಮಾರ್, ಹರೀಶ್, ಹನುಮಂತ, ಆನಂದ, ದಾಮೋದರ, ಉದಯ ಶೆಟ್ಟಿ, ಪ್ರಕಾಶ್, ಮಂಜುನಾಥ, ಪರಶುರಾಮ, ನವೀನ್, ಅಶೋಕ, ಚಂದ್ರು, ಮಹೇಶ್, ಕರಿಬಸಪ್ಪ, ಸರಸ್ವತಿ, ವನಜಾಕ್ಷಿ, ರಾಜಿಪ್ರಕಾಶ್, ನಾಗರತ್ನಾ, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಡಿವೈಎಸ್ಪಿ ಸುರೇಶ್, ಕುಂಸಿ ಠಾಣೆಯ ಇನ್‌ಸ್ಪೆಕ್ಟರ್ ಹರೀಶ್ ಪಟೇಲï, ೨ ಎಸ್‌ಐ, ೩ ಎಎಸ್‌ಐ, ೨೫ ಕಾನ್‌ಸ್ಟೆಬಲï, ೧೦ ಹೋಮ್ ಗಾರ್ಡ್ಗಳನ್ನು ನಿಯೋಜಿಸಲಾಗಿತ್ತು.

ಪೊಲೀಸರ ಲಾಠಿ ಚಾರ್ಜ್
ಆಯನೂರು ಕೋಟೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಕೆಲ ಯುವಕರು ವೈಯಕ್ತಿಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದರಿAದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಗಲಾಟೆಯಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿವೆ. ಆಗ ಪೊಲೀಸರು ಗಲಾಟೆಯಲ್ಲಿ ತೊಡಗಿದ್ದವರನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ವೈಯಕ್ತಿಕ ವಿಷಯಗಳನ್ನು ಗಣಪತಿ ವಿಸರ್ಜನೆಯಲ್ಲಿ ತರಬೇಡಿ ಎಂದು ಹೇಳಿದರೂ ಕೇಳದಿz್ದÁಗ ಅನಿವಾರ್ಯವಾಗಿ ಲಾಠಿ ಬೀಸಿ ಪರಿಸ್ಥಿತಿ ನಿಯಂತ್ರಿಸಿದರು. ಅದ್ದೂರಿಯಾಗಿ ಸಾಗುತ್ತಿದ್ದ ಮೆರವಣಿಗೆಯನ್ನು ಮೊಟಕುಗೊಳಿಸಿ ಗ್ರಾಮದ ಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net