ಮಳೆಯ ನಡುವೆಯೂ ಗಣಪತಿ ವಿಸರ್ಜನೆ

29blrp5
ಬೇಲೂರು ಪಟ್ಟಣದ ಐಡಿಎಸ್‌ಎಂಟಿ ಹೊಯ್ಸಳ ಮಾರುಕಟ್ಟೆ ವರ್ತಕರ ಸಂಘದ ಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಯುವಕರು.
Published on

ಬೇಲೂರು: ಬೇಲೂರು ಪಟ್ಟಣದ ಐಡಿಎಸ್‌ಎಂಟಿ ಹೊಯ್ಸಳ ಮಾರುಕಟ್ಟೆ ವರ್ತಕರ ಸಂಘದ 8ನೇ ವರ್ಷದ ಗಣಪತಿ ವಿಸರ್ಜನಾ ಮಹೋತ್ಸವವು ತುಂತುರು ಮಳೆಯ ನಡುವೆಯೂ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಪಟ್ಟಣದ ಐಡಿಎಸ್‌ಎಂಟಿ ಹೊಯ್ಸಳ ಮಾರುಕಟ್ಟೆಯನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಜತೆಗೆ ವರ್ತಕರು ಯಾವುದೇ ಅಂಗಡಿ-ಮುಂಗಟ್ಟುಗಳನ್ನು ತೆರೆಯದೇ ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಲ್ಲದೆ ರಾಣಿಬೆನ್ನೂರಿನ ರೋಡ್ ಆರ್ಕೆಸ್ಟ್ರಾ ಆಯೋಜಿಸಿದ್ದರಿಂದ ಯುವಕರು ಕುಣಿದು ಕುಪ್ಪಳಿಸಿದರು. ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಸಮೀಪದ ವಿಷ್ಣು ಸಮುದ್ರ ಕೆರೆಯಲ್ಲಿ ಸಂಜೆ ಸಂಘದ ಅಧ್ಯಕ್ಷ ಎಸ್.ಎಂ.ರಾಜು ನೇತೃತ್ವದಲ್ಲಿ ಭಕ್ತರ ಸಮ್ಮುಖದಲ್ಲಿ ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net