

ಸೊರಬ: ತಾಲೂಕಿನ ಚಂದ್ರಗುತ್ತಿ ಸಾರ್ವಜನಿಕ ಗಜಾನನೋತ್ಸವ ಸಮಿತಿಯಿಂದ ಗಾಂಽ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿAದ ನೆರವೇರಿತು.
ಸುಂದರವಾಗಿ ಅಲಂಕರಿಸಿದ ಟ್ರ‍್ಯಾಕ್ಟರ್ ಮೇಲೆ ಮಹಾಗಣಪತಿ ಮೂರ್ತಿಯನ್ನು ಕೂರಿಸಿ ಗ್ರಾಮದ ಸಿದ್ದಾಪುರ ರಸ್ತೆ, ರಥ ಬೀದಿ, ಭೋವಿ ಕಾಲನಿ, ಮಲ್ಲೇಕೇರಿ, ಹರೀಶ್ ರಸ್ತೆ ಹಾಗೂ ಮುಖ್ಯ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ವಿಸರ್ಜನಾ ಮೆರವಣಿಗೆಯಲ್ಲಿ ಸಾರ್ವಜನಿಕ ಮಹಾಗಣಪತಿ ಭಕ್ತ ಮಂಡಳಿಯ ಅಧ್ಯಕ್ಷರು, ಪದಾಽಕಾರಿಗಳು ಪಾಲ್ಗೊಂಡಿದ್ದರು. ಅಹಿತಕರ ಘಟನೆ ನಡೆಯದಂತೆ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಡ್ರೋನ್ ಕ್ಯಾಮರಾ ವ್ಯವಸ್ಥೆಯೂ ಇತ್ತು.