

ಕನಕಗಿರಿ: ದೈವಿ ಭಕ್ತರಾಗಿದ್ದ ಸೇವಾಲಾಲರು ಮೂಢನಂಬಿಕೆ ವಿರುದ್ಧ ಹೋರಾಡಿದ ವಿವೇಚನಾಶೀಲ ವ್ಯಕ್ತಿಯಾಗಿದ್ದರು ಎಂದು ಪಪಂ ಸದಸ್ಯ ಶೇಷಪ್ಪ ಪೂಜಾರ ಹೇಳಿದರು.
ಇಲ್ಲಿನ ಬಿಜೆಪಿ ಮಂಡಲ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಭಾರತ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮ ತಾಳಿ ಜನರಲ್ಲಿನ ಮತಾಂಧತೆ ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರಲ್ಲಿ ಸೇವಾಲಾಲ್ ಮಹಾರಾಜರು ಒಬ್ಬರು. ಪಶು ಸಾಕಣೆ ಮಾಡುತ್ತಿದ್ದ ಅವರು, ಸಂಗೀತಗಾರ, ಧೈರ್ಯಶಾಲಿ ಯೋಧರಾಗಿದ್ದರು. ತಮ್ಮ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನ ಪಡೆದರು. ಜಗದಂಬೆಯ ಆರಾಧಕರಾಗಿ ಬ್ರಹ್ಮಚಾರಿಯಾಗಿಯೇ ಉಳಿದರು. 18ನೇ ಶತಮಾನದಲ್ಲಿ ಲಂಬಾಣಿ ಸಮುದಾಯದವರ ಹಕ್ಕಿಗಾಗಿ ಆಗಿನ ನಿಜಾಮರು ಹಾಗೂ ಮೈಸೂರು ಅರಸರೊಂದಿಗೆ ಹೋರಾಟ ಮಾಡಿದರು ಎಂದರು.
ಮಂಡಲ ಪ್ರ. ಕಾರ್ಯದರ್ಶಿಗಳಾದ ಗ್ಯಾನಪ್ಪ ಗಾಣದಾಳ, ಪ್ರಕಾಶ ಹಾದಿಮನಿ, ಮಂಡಲ ಯುವ ಮೊರ್ಚಾ ಪ್ರ.ಕಾರ್ಯದರ್ಶಿಗಳಾದ ವಿನಾಯಕ ಚಿತ್ತರಕಿ ಮತ್ತು ಪೃಥ್ವಿ ಮ್ಯಾಗೇರಿ, ಕಾರ್ಯದರ್ಶಿಗಳಾದ ನಿಂಗರಾಜ್ ಬೆನ್ನೂರ್, ಪ್ರಮುಖರಾದ ರುದ್ರಪ್ಪ ದೇವರೆಡ್ಡಿ, ಸುರೇಶ್ ಕುರುಗೋಡು ಇತರರಿದ್ದರು.
15ಕೆಎನ್‌ಕೆ3
ಕನಕಗಿರಿಯ ಬಿಜೆಪಿ ಮಂಡಲ ಕಚೇರಿಯಲ್ಲಿ ಶನಿವಾರ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಪಪಂ ಸದಸ್ಯ ಶೇಷಪ್ಪ ಪೂಜಾರ, ಪ್ರ. ಕಾರ್ಯದರ್ಶಿಗಳಾದ ಗ್ಯಾನಪ್ಪ ಗಾಣದಾಳ, ಪ್ರಕಾಶ ಹಾದಿಮನಿ ಇತರರಿದ್ದರು.
====