

ಧಾರವಾಡ: ನಗರದ ಟಾಟಾ ಮೋಟಾರ್ಸ್ ಬಾಡಿ ಸೊಲ್ಯೂಷನ್ಸ್ ಲಿಮಿಟೆಡ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ವಿದ್ಯಾದಾನಂ ಭಾಗವಾಗಿ ಮುಮ್ಮಿಗಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 8 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಂಗಳವಾರ ವಿದ್ಯಾರ್ಥಿ ವೇತನ ನೀಡಲಾಯಿತು. ಮಾನವ ಸಂಪನ್ಮೂಲ ಮುಖ್ಯಸ್ಥ ರವಿ ಕುಲಕರ್ಣಿ, ಎಸ್ಡಿಎಂಸಿ ಸದಸ್ಯ ರಾಜು ಮಲ್ಲೂರು, ಸತೀಶ ದೇಶಪಾಂಡೆ, ಗಂಗಪ್ಪ ಕಡೆಮನಿ, ಕಂಪನಿ ಸಿಬ್ಬಂದಿ, ಶಿಕ್ಷಕರು, ಇತರರು ಇದ್ದರು.