ಫಲಾನುಭವಿ ಮಕ್ಕಳಿಗೆ ವಿದ್ಯಾನಿಧಿ ವಿತರಣೆ

hbr
Published on

ಜಾಲಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ, ಹೆಬ್ರಿ ತಾಲೂಕು ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಾಸಾಶನ ಯೋಜನೆಯ ಫಲಾನುಭವಿಗಳ ಮಕ್ಕಳ ವಿದ್ಯಾರ್ಜನೆಗೆ ಮಂಜೂರಾದ ವಿದ್ಯಾನಿಧಿ ವಿತರಣೆ ಹೆಬ್ರಿಯಲ್ಲಿ ನಡೆಯಿತು.

ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ವಾತನಾಡಿದರು. 12 ವಿದ್ಯಾರ್ಥಿಗಳಿಗೆ ಛತ್ರಿ, ನೋಟ್‌ಬುಕ್, ನೀರಿನ ಬಾಟಲಿ, ಬ್ಯಾಗ್, ಕಂಪಾಸ್ ಬಾಕ್ಸ್, ಓರ್ವ ವಿದ್ಯಾರ್ಥಿಗೆ ಕಾಲೇಜು ಶಿಕ್ಷಣದ ಶುಲ್ಕ ವಿತರಿಸಲಾಯಿತು. ಪ್ರಮುಖರಾದ ಮಹಾಬಲ ಶೆಟ್ಟಿ, ಸುಕೇಶ್ ಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net