ಸಾಮರ್ಥ್ಯಕ್ಕೆ ಅನುಗುಣವಾಗಿ ಸದಸ್ಯರಿಗೆ ಸಾಲ ವಿತರಣೆ

23Kush01
ಕೂಡುಮಂಗಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕೆ.ಕೆ.ಹೇಮಂತ್‌ಕುಮಾರ್. ಉಪಾಧ್ಯಕ್ಷ ವಿ.ಬಸಪ್ಪ, ನಿರ್ದೇಶಕರಾದ ಕೆ.ಟಿ.ಅರುಣ್‌ಕುಮಾರ್, ಕೃಷ್ಣಗೌಡ, ಕೆ.ಕೆ.ಪವಿತ್ರಾ, ರಮೇಶ್, ಕೆ.ಜೆ.ಕುಮಾರ್, ನಾಗರಾಜು, ಎಸ್.ಆರ್.ಅರುಣ್‌ರಾವ್, ಕೆ.ಬಿ.ರಾಮಚಂದ್ರ, ಕೆ.ಪಿ.ರಾಜು, ಎಸ್.ಎಸ್.ಕೃಷ್ಣ, ಜಯಶ್ರೀ ಇತರರು ಇದ್ದರು.
Published on

ಕುಶಾಲನಗರ: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಸಂಘದ ನೂತನ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.

2023-24 ನೇ ಸಾಲಿನಲ್ಲಿ 147.40 ಕೋಟಿ ರೂ. ವ್ಯವಹಾರ ನಡೆಸಿದ್ದು, ಇದರಲ್ಲಿ ಸಹಕಾರ ಸಂಘದ ಬೈಲಾದಂತೆ 32.78 ಕೋಟಿ ರೂ.ಗಳಷ್ಟು ಸಾಲ ವಿತರಿಸಿದ್ದು, ಕಳೆದ ಸಾಲಿಗೆ ಹೋಲಿಸಿದಾಗ 7.47 ಕೋಟಿ ರೂ. ಹೆಚ್ಚಾಗಿದ್ದು, ಸಂಘದ ಕಾರ್ಯವ್ಯಾಪ್ತಿ ಸದಸ್ಯರಿಗೆ ಅವರ ಅರ್ಹತೆಗೆ ಹಾಗೂ ಸಾಲ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ವಿತರಣೆ ಮಾಡಲಾಗಿದೆ.

ಸಂಘವು 147.47 ಕೋಟಿ ರೂ. ವಹಿವಾಟು ನಡೆಸಿದ್ದು, ಸಂಘದ ಲಾಭ-ನಷ್ಟದ ಪ್ರಕಾರ ಎಲ್ಲ ಖರ್ಚು ವೆಚ್ಚಗಳನ್ನು ಕಳೆದು 75.60 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. 15 ವರ್ಷಗಳ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದ ಲಾಭ ಗಳಿಸಿರುವುದು ಪ್ರಥಮವಾಗಿದೆ ಎಂದರು.

ಅಡಳಿತ ಮಂಡಳಿಯು ಸದಸ್ಯರ ಸಹಕಾರದೊಂದಿಗೆ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಈ ಎಲ್ಲ ಯೋಜನೆಗಳು ಪ್ರಗತಿಗೆ ಸದಸ್ಯರ ಸಹಕಾರ ಬಹುಮುಖ್ಯ ಎಂದರು. ಅಲ್ಲದೆ ಈ ಸಾಲಿನಲ್ಲಿ ಪ್ರತಿವರ್ಷ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದ ನೀಡುವ ಬಹುಮಾನವನ್ನು ಪಡೆದುಕೊಂಡಿರುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ನಡೆದವು. ವಿದ್ಯಾಭ್ಯಾಸದಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ರೈತರ ಮಕ್ಕಳಿಗೆ ಪ್ರೋತ್ಸಾಹ ಧನವಾಗಿ ಬಹುಮಾನವನ್ನು ವಿತರಿಸಲಾಯಿತು. 2023-24ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮತ್ತು ಹಿಂದಿನ ಸಾಲಿನ ವರದಿಯ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.

ಸಂಘದ ಉಪಾಧ್ಯಕ್ಷ ವಿ.ಬಸಪ್ಪ, ನಿರ್ದೇಶಕರಾದ ಕೆ.ಟಿ.ಅರುಣ್ ುಮಾರ್, ಕೃಷ್ಣಗೌಡ, ಕೆ.ಕೆ.ಪವಿತ್ರಾ, ರಮೇಶ್, ಕೆ.ಜೆ.ಕುಮಾರ್, ನಾಗರಾಜು, ಎಸ್.ಆರ್.ಅರುಣ್‌ರಾವ್, ಕೆ.ಬಿ.ರಾಮಚಂದ್ರ, ಕೆ.ಪಿ.ರಾಜು, ಎಸ್.ಎಸ್.ಕೃಷ್ಣ, ಜಯಶ್ರೀ, ವೃತ್ತಿಪರ ನಿರ್ದೇಶಕರಾದ ಆರ್.ಕೆ.ನಾಗೇಂದ್ರ, ಕುಶಾಲನಗರ ವೃತ್ತದ ಮೇಲ್ವಿಚಾರಕ ಅಬ್ದುಲ್ ರಶೀದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮೀನಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net