1.90 ಕೋಟಿ ರೂ.ಬೆಳೆ ಸಾಲ ವಿತರಣೆ

19 TKE 1
Published on

ತರೀಕೆರೆ: ಎಂ.ಸಿ.ಹಳ್ಳಿ ಪಿಎಸಿಎಸ್ 3 ಕೋಟಿ ರೂ. ವಹಿವಾಟು ನಡೆಸಿ ಪ್ರಗತಿಯತ್ತ ದಾಪುಗಾಲಿಟ್ಟಿದೆ ಎಂದು ಸಂಘದ ಅಧ್ಯಕ್ಷ ಎನ್.ರಾಮೇಗೌಡ ಹೇಳಿದರು. ಎಂ.ಸಿ.ಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ರೈತರು ಮತ್ತು ಗ್ರಾಹಕರ ಸಮಸ್ಯೆಗೆ ಸ್ಪಂದಿಸಿ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ. 1.90 ಕೋಟಿ ರೂ. ಕೆಸಿಸಿ ಬೆಳೆ ಸಾಲ, 10 ಲಕ್ಷ ರೂ ವಾಹನ ಸಾಲ, 20 ಲಕ್ಷ ರೂ. ವ್ಯಾಪಾರ ಸಾಲ ನೀಡಲಾಗಿದೆ. ಸಕಾಲದಲ್ಲಿ ಪ್ರತಿಶತ ಸಾಲ ವಸೂಲಾತಿ ಮಾಡಿ ಪ್ರಗತಿ ಸಾಧಿಸಿದ್ದು, ಕಳೆದ ಎಂಟು ತಿಂಗಳಿನಿಂದ 1,600 ಕಾರ್ಡ್‌ದಾರರಿಗೆ ಸಮರ್ಪಕ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಬಿ.ಸಿ.ಪೂಜಾ, ನಿರ್ದೇಶಕರಾದ ಎಚ್.ಪಿ.ನಾಗೇಶ್, ಈ.ಧನಂಜಯ, ಬಿ.ಎಸ್.ಸುರೇಶ್, ಎಂ.ಆರ‌್ಮುದು, ಎಚ್.ಎಸ್.ಮೋಹಿದ್ದೀನ್, ಎಂ.ಈ.ಧರ್ಮೇಗೌಡ, ಎಚ್.ಟಿ.ಶಕುಂತಲ, ಕಷ್ಣಯ್ಯ, ವೃತ್ತಿಪರ ನಿರ್ದೇಶಕ ರೇವಣ್ಣ ಸಿಇಒ ಎಂ.ಈ.ಪ್ರಮೋದ್ ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net