

ಕೋಲಾರ: ಕೇಂದ್ರ ಸರ್ಕಾರದ ಬಜೆಟ್ ಕೇವಲ ಎನ್ಡಿಎ ಅಧಿಕಾರಗಳಿರುವ ರಾಜ್ಯಗಳಿಗೆ ಸೀಮಿತವಾಗಿದ್ದು, ರಾಜ್ಯಕ್ಕೆ ಅನ್ಯಾಯವೆಸಗಿದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ಬಜೆಟ್ ಕುರಿತು ಶನಿವಾರ ಸುದ್ದಿಗಾರರೊಮದಿಗೆ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆಯಲ್ಲಿ ಎನ್ಡಿಯ ಒಕ್ಕೂಟದಲ್ಲಿದ್ದ ಪಕ್ಷಗಳು ಅಧಿಕಾರಿದಲ್ಲಿ ಇರುವ ರಾಜ್ಯಗಳಿಗೆ ಸಿಂಹಪಾಲು ಸಿಕ್ಕಿದೆ. ವಿರೋಧ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದಿಂದಲೇ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸಚಿವರಾಗಿದ್ದಾರೆ. ಅವರಿಗೆ
ನಮ್ಮ ರಾಜ್ಯದ ಬಗ್ಗೆ ಕಾಳಜಿಯಿರಬೇಕಿತ್ತು. ಈ ಬಜೆಟ್ ಬಿಜೆಪಿ ಮನೆಯ ಬಜೆಟ್ ಆಗಿದೆ. ಕನಿಷ್ಠ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಕೊಟ್ಟಿಲ್ಲ, ಒಟ್ಟಾರೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕುಟುಕಿದರು.
ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದ ದೇಶವನ್ನು ಬಿಜೆಪಿ ಸರ್ಕಾರ ಹಿಂದಕ್ಕೆ ಎಳೆದೊಯ್ಯುತ್ತಿದೆ. ಇದು ಯಥಾಪ್ರಕಾರ ಕರ್ನಾಟಕದ ಪಾಲಿಗೆ ಮಾತ್ರವಲ್ಲ ಇಡೀ ದೇಶಕ್ಕೆ ನಿರಾಶದಾಯಕವಾಗಿದೆ ಎಂದು ಹೇಳಿದರು.
ಮುಖ್ಯವಾಗಿ, ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ನಮ್ಮ ರಾಜ್ಯ ಈ ಬಜೆಟ್ನಲ್ಲಿ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ ಎಂದು ಬೇಸರಿಸಿದರು.
ಚುನಾವಣೆ ಗಮನದಲ್ಲಿಟ್ಟುಕೊಂಡು ಮಂಡನೆ
ಕೋಲಾರ: ಕರ್ನಾಟವನ್ನು ಪ್ರತಿನಿಧಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ರಾಜ್ಯದ ಬಗ್ಗೆ ಕಾಳಜಿ ತೋರಿಸಿಲ್ಲ. ಮುಂದೆ ಎದುರಾಗುವ ಚುನಾವಣೆಗಳನ್ನು ಗಮನ ದಲ್ಲಿಟ್ಟುಕೊಂಡು ಆಯ&ವ್ಯಯ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷಿ$್ಮನಾರಾಯಣ ಪ್ರತಿಕ್ರಿಯಿಸಿದ್ದಾರೆ.
ದುರ್ಬಿನಾ ಹಾಕಿಕೊಂಡು ಹುಡುಕಿದರೂ ಜನಪರ ಕಾರ್ಯಕ್ರಮ ಘೋಷಣೆ ಮಾಡಿರುವುದು ದೊರೆಯುವುದಿಲ್ಲ, ನಿರ್ಮಲಾ ಸೀತಾರಾಮನ್ ಸೇರಿ ಇನ್ನು ಹಲವು ಮಂದಿ ಕೇಂದ್ರ ಸಚಿವರು ಕರ್ನಾಟವನ್ನು ಪ್ರತಿನಿಧಿಸಿದ್ದರು. ರಾಜ್ಯದ ಬಗ್ಗೆ ಕಾಳಜಿ ತೋರಿಸಿಲ್ಲ, ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ಕೊಡಿ ಎಂದು ಮನವಿ ಮಾಡುವಲ್ಲಿ ಸಂಪೂರ್ಣವಾಗಿ ವಿಲರಾಗಿದ್ದಾರೆ ಎಂದರು.
ನಬಾರ್ಡ್ನಿಂದ ರಾಜ್ಯ ನೀಡುತ್ತಿದ್ದ ಸಾಲದ ಮೊತ್ತದ ಪೈಕಿ ಶೇ.50 ಕಡಿತ ಗೊಳಿಸಿದ್ದಾರೆ, ನರೇಗಾದಲ್ಲಿ ಅನುದಾನ ಕಡಿತಗೊಳಿಸಿದ್ದಾರೆ. ಅಮಿತ್ ಷಾ ಮತ್ತು ಮೋದಿ ಅವರ ಮುಂದೆ ರಾಜ್ಯದ ಕೇಂದ್ರ ಸಚಿವರು ಧ್ವನಿ ಎತ್ತಿಲ್ಲ, ಮೇಕ್ ಇನ್ ಇಂಡಿಯಾ, ಸ್ವದೇಶಿ ತತ್ವವನ್ನು ಅಳವಡಿಸಿಕೊಳ್ಳುತ್ತೇವೆ ಎಂದು ಹೇಳುವ ಅವರಿಗೆ ಕಾಳಜಿಯಿಲ್ಲ. ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಬೆಂಗಳೂರಿನಲ್ಲಿ ಸಂಪನ್ಮೂಲ ಅಭಿವೃದ್ಧಿಗೂ ಒತ್ತು ನೀಡಿಲ್ಲ, ನಿತೀಶ್ಕುಮಾರ್ ಅವರನ್ನು ಓಲೈಸಿಕೊಳ್ಳಲು ಬಿಹಾರ್ಗೆ ಬಜೆಟ್ನಲ್ಲಿ ಅನುಕೂಲ ಕೊಟ್ಟಿದ್ದಾರೆ, ಬಡವರು, ಮಹಿಳೆಯರನ್ನು ಗಮನದಲ್ಲಿ ಇಟ್ಟುಕೊಳ್ಳದೆ ಸಾರಸಾಗಟಾಗಿ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.