ತುಮಕೂರು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಫ್​ಲೈನ್ ಸೇವೆಗೆ ಪತ್ರ ಬರಹಗಾರರ ಆಗ್ರಹ

TMK sub registrar
ಸಾಂದರ್ಭಿಕ ಚಿತ್ರ
Published on

ತುಮಕೂರು : ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆನ್‌ಲೈನ್ ಮೂಲಕ ಮೊದಲ ನೋಂದಣಿ ‘ಡಿಸ್ಪ್ಯಾಚ್ ಡೀಡ್’ ಆಗಿದೆಯಾದರೂ ಆಫ್​ಲೈನ್ ಸೇವೆಗೆ ಪತ್ರಬರಹಗಾರರ ಆಗ್ರಹ ಮುಂದುವರಿದಿದೆ.

ಆನ್‌ಲೈನ್ ಸೇವೆ ಆರಂಭಿಸಿರುವ ಹಿನ್ನೆಲೆಯಲ್ಲಿ ತುಮಕೂರಿನ ಕಚೇರಿಯಲ್ಲಿ ಕಳೆದ ಸೋಮವಾರದಿಂದಲೂ ಒಂದೂ ನೋಂದಣಿ ಸಾಧ್ಯವಾಗಿರಲಿಲ್ಲ. ಇದೇ ಕಾರಣವನ್ನು ಇಟ್ಟುಕೊಂಡು ಆನ್‌ಲೈನ್ ನೋಂದಣಿ ಮಾಡುವುದು ಕಷ್ಟವಾಗಿದ್ದು, ಆಫ್‌ಲೈನ್‌ಗೆ ಅವಕಾಶ ಮಾಡಿಕೊಡಬೇಕು ಎಂದು ಪತ್ರಬರಹಗಾರರೂ ಒತ್ತಡ ಹಾಕಿದ್ದರು.

ಜನರ ಅನುಕೂಲಕ್ಕಾಗಿ ಜಾರಿಯಾದ ಆನ್‌ಲೈನ್ ಸೇವೆಯಿಂದ ಜನರಿಗೆ ಅನನುಕೋಲವೇ ಜಾಸ್ತಿಯಾಗಿದೆ. ಕ್ರಮ, ಮಾರಾಟ, ವರ್ಗಾವಣೆ ಪತ್ರ, ಅಡಮಾನ ಪತ್ರ ಬರೆಸಿಕೊಳ್ಳಲು ಸ್ಟಾಂಪ್‌ವೆಂಡರ್‌ಗಳ ಮೊರೆಹೋಗಬೇಕಾಗಿದೆ. ಪಿಡಿಇಎಸ್‌ನಲ್ಲಿ 15ಕ್ಕೂ ಹೆಚ್ಚು ದಾಖಲೆ ಅಪ್ ಲೋಡ್ ಮಾಡಲು ಏಜೆಂಟ್‌ಗಳಿಗೆ ದುಬಾರಿ ಶುಲ್ಕ ನೀಡಬೇಕಾಗಿರುವುದು ಜನರಿಗೂ ಸಮಸ್ಯೆ ತಂದೊಡಿದೆ.

ತುಮಕೂರು ಕಚೇರಿಯಲ್ಲಿ ಪ್ರತಿನಿತ್ಯ 80ರಿಂದ 100 ನೋಂದಣಿ ನಡೆಯುತ್ತಿದ್ದವು. ಕಳೆದ ಸೋಮವಾರದಿಂದ ಒಂದೇ ಒಂದು ನೋಂದಣಿ ಮಾಡಲು ಸಾಧ್ಯವಾಗಿಲ್ಲ. ಸರ್ಕಾರಕ್ಕೆ 4ರಿಂದ 5 ಕೋಟಿ ರೂ. ಸ್ಟಾಂಪ್‌ಡ್ಯೂಟಿ ಲಾಸಾಗಿದ್ದು, ಆದಷ್ಟು ಬೇಗ ಸಮಸ್ಯೆ ಭಗೆಹರಿಸಬೇಕಿದೆ. ಪತ್ರಬರಹಗಾರರು ತಾಂತ್ರಿಕವಾಗಿ ಅಷ್ಟೋಂದು ಪರಿಣಿತಿ ಇಲ್ಲದಿರುವ ಕಾರಣಕ್ಕೆ ಆ್ಲೈನ್‌ಗೆ ಒತ್ತಾಯಿಸಿದ್ದಾರೆ.

ಆನ್‌ಲೈನ್, ಆಫ್‌ಲೈನ್ ಎರಡಕ್ಕೂ ಅವಕಾಶ?: ನೋಂದಣಿ ಸ್ಥಗಿತವಾಗಿರುವುದು ಅಧಿಕಾರಿಗಳು ಹಾಗೂ ಪತ್ರಬರಹಗಾರರ ತಲೆ ನೋವಿಗೆ ಕಾರಣವಾಗಿದೆ. ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಸಾಮಾನ್ಯವಾದರೂ ಅದನ್ನು ಭಗೆಹರಿಸುವ ಬದಲಾಗಿದೆ ಎಲ್ಲರಿಗೂ ಅನುಕೂಲವಾಗುವಂತೆ ಮತ್ತಷ್ಟು ದಿನ ಆನ್‌ಲೈನ್ ಹಾಗೂ ಆಫ್‌ಲೈನ್ ಸೇವೆಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಮೇಲಧಿಕಾರಿಗಳನ್ನು ಒಪ್ಪಿಸಿ ಎರಡೂ ಸೇವೆ ಆರಂಭಿಸುವ ಮೂಲಕ ಎಂದಿನ ವ್ಯವಹಾರ ಆರಂಭಿಸುವ ಸಾಧ್ಯತೆಯಿದೆ.

ಸರ್ಕಾರದ ಮಹತ್ವಾಕಾಂಕ್ಷಿ ಆನ್‌ಲೈನ್ ಸೇವೆ ಕೆಲವು ತಾಂತ್ರಿಕ ಕಾರಣದಿಂದ ಸ್ಥಗಿತವಾಗಿದೆ. ಶುಕ್ರವಾರ ಒಂದು ನೋಂದಣಿಯಾಗಿದ್ದು, ಸಮಸ್ಯೆ ಭಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಕಚೇರಿಯಲ್ಲಿ ಪ್ರತಿದಿನ ಕನಿಷ್ಠ 80ರಿಂದ 100 ನೋಂದಣಿ ನಡೆಯುತ್ತಿತ್ತು. ಜನರಿಗೆ ಆಗಿರು ತೊಂದರೆ ತಪ್ಪಿಸಲು ಹಿರಿಯ ಅಧಿಕಾರಿಗಳ ಸೂಚನೆಯಂತೆ ಕ್ರಮಕೈಗೊಳ್ಳಲಾಗುವುದು. ಪ್ರಗತಿ, ಉಪನೋಂದಣಾಧಿಕಾರಿ ಸೋಮವಾರದಿಂದ ಜಮೀನು ನೋಂದಣಿ ಮಾಡಿಸಲು ಅಲೆದಾಡುತ್ತಿದ್ದೇವೆ. ಆನ್‌ಲೈನ್‌ನಲ್ಲಿ ನಮ್ಮ ದಾಖಲೆಗಳನ್ನು ಅಪ್‌ಲೊಡ್ ಮಾಡಲು ಸಾಧ್ಯವಾಗಿಲ್ಲ. ಈ ಪ್ರಕ್ರಿಯೆ ಬಗ್ಗೆ ಇಲ್ಲಿನ ಅಧಿಕಾರಿಗಳಿಗೂ ಮಾಹಿತಿಯಿಲ್ಲ. ಇನ್ನೂ ಪತ್ರಬರಹಗಾರರೂ ಈ ನಿಟ್ಟಿನಲ್ಲಿ ಪರಿಪಕ್ವವಾಗಿಲ್ಲ. ಸರ್ಕಾರ ಮತ್ತಷ್ಟು ದಿನ ಆಫ್‌ಲೈನ್‌ಗೂ ಅವಕಾಶ ನೀಡಬೇಕು. ಲೋಹಿತ್, ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net