ಕೊಳ್ಳೇಗಾಲದಲ್ಲಿ ಅಂಗವಿಕಲ ನಾಪತ್ತೆ

18-kollegal-2 siddarajunapathe
ಸಿದ್ದರಾಜು
Published on

ಕೊಳ್ಳೇಗಾಲ: ಪಟ್ಟಣದ ನಾಯಕರ ದೊಡ್ಡ ಬೀದಿಯ ನಿವಾಸಿ ಅಂಗವಿಕಲರೊಬ್ಬರು ಕಳೆದ ಮೂರ್ನಾಲ್ಕು ತಿಂಗಳಿನಿಂದ ಕಾಣೆಯಾಗಿರುವ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಯಕರ ದೊಡ್ಡ ಬೀದಿಯ ನಿವಾಸಿ ಸಿದ್ದರಾಜು (55) ಕಾಣೆಯಾದವರು. ಇವರು ಮನೆಯಿಂದ ಹೊರ ಹೋದವರು ಇದುವರೆಗೂ ವಾಪಸ್ ಬಾರದ ಕಾರಣ ತಡವಾಗಿ ಅವರ ಕುಟುಂಬದವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net