ವಿಕಲಚೇತನ ವ್ಯಕ್ತಿ ಆತ್ಮಹತ್ಯೆಗೆ ಯತ್ನ

raichur
raichur
Published on

ರಾಯಚೂರು ಸರ್ಕಾರದಿಂದ ವಿತರಿಸುವ ನಾಲ್ಕು ಚಕ್ರದ ಸ್ಕೂಟಿ ನೀಡದ ಕಾರಣಕ್ಕೆ ಮನನೊಂದ ವಿಕಲಚೇತನ ವ್ಯಕ್ತಿ ಓವರ್ ಹೆಡ್ ಟ್ಯಾಂಕ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತಾಲೂಕಿನ ಶಕ್ತಿನಗರದ ಲೇಬರ್ ಕಾಲೋನಿ ನಿವಾಸಿ ಶಫಿ ಆತ್ಮಹತ್ಯೆಗೆ ಯತ್ನಿಸಿದವರು.

ಆರ್‌ಟಿಪಿಎಸ್‌ನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಶಫಿ ವಿಕಲಚೇತನವಾಗಿದ್ದು, ಸರ್ಕಾರದಿಂದ ಕೊಡುವ ನಾಲ್ಕು ಚಕ್ರದ ಸ್ಕೂಟಿ ಮಂಜೂರು ಮಾಡಿಸಿಕೊಳ್ಳಲು ಜಿಲ್ಲಾ ವಿಕಲಚೇತನ ಇಲಾಖೆಗೆ ನಾಲ್ಕೈದು ವರ್ಷಗಳಿಂದ ಸತತ ಪ್ರಯತ್ನ ನಡೆಸಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆ ನೀಡದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

ಮಾಹಿತಿ ಪಡೆದ ಶಕ್ತಿನಗರ ಠಾಣೆ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ನಾಲ್ಕು ಚಕ್ರದ ವಾಹನ ಕೊಡಿಸುವುದಾಗಿ ಶಫಿಗೆ ಭರವಸೆ ನೀಡಿದ ಬಳಿಕ ಕೆಳಗಿಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net