ಅಂಗವಿಕಲರ ಅನುದಾನ ಬಳಕೆ ಮಾಡಿ

23 MANVI 01
ಮಾನ್ವಿಯಲ್ಲಿ ತಾಪಂ ಸಹಾಯಕ ನಿರ್ದೇಶಕಿ ದೀಪಾಗೆ ರಾಜ್ಯ ವಿಕಲಚೇತನರ ಆರ್.ಪಿ.ಡಿ.ಟಾಸ್ಕ್‌ಫೋರ್ಸ್ ತಾಲೂಕು ಸಮಿತಿ ಮನವಿ ಸಲ್ಲಿಸಿತು. ತಾಲೂಕು ಸಮಿತಿ ಅಧ್ಯಕ್ಷ ಹನುಮೇಶ ಕಾತರಕಿ, ವೆಂಕಟೇಶ, ದೊಡ್ಡ ನರಸಪ್ಪ, ನರಸಪ್ಪ ಕಾತರಕಿ ಇದ್ದರು.
Published on

ಮಾನ್ವಿ: ಅಂಗವಿಕಲರ ಅನುದಾನ ಬಳಕೆಗೆ ಒತ್ತಾಯಿಸಿ ರಾಜ್ಯ ವಿಕಲಚೇತನರ ಆರ್.ಪಿ.ಡಿ.ಟಾಸ್ಕ್‌ಫೋರ್ಸ್ ತಾಲೂಕು ಸಮಿತಿ ಶನಿವಾರ ತಾಪಂ ಸಹಾಯಕ ನಿರ್ದೇಶಕಿ ದೀಪಾಗೆ ಮನವಿ ಸಲ್ಲಿಸಿತು.

ಸಮಿತಿ ಜಿಲ್ಲಾಧ್ಯಕ್ಷ ಮಹ್ಮದ್ ಜಾಫರ್ ಮಾತನಾಡಿ, ಕಳೆದ 4 ವರ್ಷಗಳಿಂದ ಅಂಗವಿಕಲರ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ. ಗ್ರಾಪಂ, ತಾಪಂ, ಜಿಪಂಗಳಲ್ಲಿ ಅಂಗವಿಕಲರಿಗೆ ಶೇ.5 ಅನುದಾನ ಮೀಸಲಿಡಲಾಗಿದೆ. ಈ ಅನುದಾನವನ್ನು ಕೇವಲ ಸಮುದಾಯ ಆಧಾರಿತ ಕಾರ್ಯಕ್ರಮಗಳಿಗೆ ಮಾತ್ರ ಬಳಕೆಗೆ ಅವಕಾಶವಿದೆ. ಸರ್ಕಾರ 2020ರ ನಿಯಮವನ್ನು ಪರಿಷ್ಕರಿಸಿ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಮತ್ತು ಗ್ರಾಪಂನಲ್ಲಿ ಬಳಕೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net