ಅಂಗವಿಕಲರು ವಿಶ್ವ ಮೆಚ್ಚುವ ಸಾಧಕರಾಗಬಹುದು

CTD 24 Sadhana 2
Published on

ಚಿತ್ರದುರ್ಗ: ವಿಶ್ವ ಮೆಚ್ಚುವ ಸಾಧಕರಾಗಬಲ್ಲ ಶಕ್ತಿ ಅಂಗವಿಕಲರಲ್ಲಿದೆ ಎಂದು ಎಂಎಲ್ಸಿ ಕೆ.ಎಸ್.ನವೀನ್ ಅಭಿಪ್ರಾಯಪಟ್ಟರು.

ಸಾಮಾಜಿಕ ಅಧಿಕಾರಿತಾ ಶಿಬಿರ-ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ಸಾಧನ ಸಲಕರಣೆಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಚೆಗೆ ಅಂಗವಿಕಲ ಮಹಿಳಾ ಕ್ರೀಡಾಪಟುಗಳು ಭಾರತ ಪ್ರತಿನಿಧಿಸಿ ವಿಶ್ವ ಕ್ರಿಕೆಟ್ ಟೂರ್ನಿ ಗೆದ್ದು, ಚಿನ್ನದ ಪದಕ ಗಳಿಸಿದ್ದಾರೆ. ಹೀಗಾಗಿ ನೀವು ಛಲದಿಂದ ಗುರಿ ಸಾಧಿಸಲು ಮುಂದಾಗಬೇಕು ಎಂದರು.

ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಭಾರತದ ಮಾನವ ಸಂಪನ್ಮೂಲ ವಿಶ್ವದಲ್ಲೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಅಂಗವಿಕಲರಿಗೂ ಆದ್ಯತೆ ನೀಡಿ, ರಾಷ್ಟ್ರದ ಪ್ರಗತಿಯಲ್ಲಿ ಕೈಜೋಡಿಸಲಿ ಎಂಬ ಕಾರಣಕ್ಕೆ ಅಡಿಪ್ ಯೋಜನೆ ಮೂಲಕ ಸೌಲಭ್ಯ ವಿತರಿಸಲಾಗುತ್ತಿದೆ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಶಿಬಿರದಲ್ಲಿ 39 ಬ್ಯಾಟರಿ ಚಾಲಿತ ಯಾಂತ್ರೀಕೃತ ಬೈಸಿಕಲ್ಸ್, 79 ಸಾದಾ ಕೈಚಾಲಿತ ಸೈಕಲ್, 226 ಗಾಲಿ ಕುರ್ಚಿಗಳು, 614 ಕಂಕುಳ ಊರುಗೋಲು, 11 ವಾಕಿಂಗ್ ಸ್ಟಿಕ್ಸ್, 1 ಬ್ರೈಲ್ ಕ್ಯಾನೆಸ್, ಅಂಧರಿಗೆ 15 ಬ್ರೈಲ್ಕಿಟ್ಸ್ ಮತ್ತು 27 ಸ್ಮಾರ್ಟ್ ಫೋನ್, 69 ರೊಲೇಟರ್ಸ್‌, 1 ಬ್ರೈಲ್ ಸ್ಲೇಟ್, 850 ಶ್ರವಣ ಸಾಧನ, 80 ಸುಗಮ್ಯ ಕೇನ್ಸ್, 224 ಪ್ರಾಸ್ಥೆಸಿಸ್ ಮತ್ತು ಕ್ಯಾಲಿಫರ್ಸ್ ಸೇರಿ 2,293 ಸಾಧನ ಸಲಕರಣೆ ವಿತರಿಸಲಾಗುತ್ತ್ತಿದೆ ಎಂದರು.

ಜಿಪಂ ಉಪಕಾರ್ಯದರ್ಶಿ ತಿಮ್ಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಅಲಿಂಕೋ ಹಿರಿಯ ವ್ಯವಸ್ಥಾಪಕ ಅಶೋಕ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net