ಜ.12ರಂದು ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆ

ddddddddddd
Published on




ಮಂಗಳೂರು : ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317 ಡಿ ಮತ್ತು ಲಯನ್ಸ್ ಕ್ಲಬ್ ವೆಲೆನ್ಸಿಯಾ ಮಂಗಳೂರು ವತಿಯಿಂದ ಜ.12ರಂದು ಬೆಳಗ್ಗೆ 9ರಿಂದ ನಗರದ ಮಂಗಳಾ ಕ್ರೀಡಾಂಗಣದಲ್ಲಿ ‘ಸ್ಮೈಲ್ - 2024’ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆ ನಡೆಯಲಿದೆ.
ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಲೆಸ್ಲಿ ಡಿಸೋಜ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಯಂಕಾಲ ಸಮಾರೋಪ ನಡೆಯಲಿದ್ದು ಲಯನ್ಸ್ ಜಿಲ್ಲಾ ಉಪ ಗವರ್ನರ್ ಅರವಿಂದ ಶೆಣೈ ಮುಖ್ಯ ಅತಿಥಿಯಾಗಿ
ಭಾಗವಹಿಸಲಿದ್ದಾರೆ. ಒಟ್ಟು 42 ಶಾಲೆಗಳ 1800 ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ, ಓಟ, ಹೈಜಂಪ್, ಲಾಂಗ್‌ಜಂಪ್ ಸಹಿತ
ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದರು. ‘ಸ್ಮೈಲ್ - 2024’ ಸಂಯೋಜಕ ನವೀನ್‌ಚಂದ್ರ ಸುವರ್ಣ, ಸಂಸ್ಥೆ ಕಾರ್ಯದರ್ಶಿ ವಲ್ಸಾ ಡಿಸೋಜ, ಕೋಶಾಧಿಕಾರಿ ಲಾರೆನ್ಸ್ ಸೆರಾವೊ, ಓಸ್ವಾಲ್ಡ್ ಡಿಕುನ್ಹಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net