ಅಂಗವಿಕಲ ಮಕ್ಕಳು ದೇವರ ಸೃಷ್ಟಿ

8 bdvt1
ಭದ್ರಾವತಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಧನಾ ಸಲಕರಣೆಗಳ ವಿತರಣೆ ಕಾರ್ಯಕ್ರಮಕ್ಕೆ ಬಿ.ಕೆ.ಜಗನ್ನಾಥ್ ಚಾಲನೆ ನೀಡಿದರು. ರಾಜೇಶ್, ಏ.ಕೆ.ನಾಗೇಂದ್ರಪ್ಪ, ಶಿವಬಸಪ್ಪ ಇತರರಿದ್ದರು.
Published on

ಭದ್ರಾವತಿ: ಅಂಗವಿಕಲ ಮಕ್ಕಳು ದೇವರ ಸೃಷ್ಟಿ. ಆದ್ದರಿಂದ ಯಾವುದೇ ಕಾರಣಕ್ಕೂ ಪಾಲಕರು ಹಿಂಜರಿಯಬೇಕಿಲ್ಲ ಎಂದು ಉದ್ಯಮಿ ಬಿ.ಕೆ.ಜಗನ್ನಾಥ್ ತಿಳಿಸಿದರು.

ನಗರದ ಶ್ರೀ ಸತ್ಯಸಾಯಿ ಮಂದಿರದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಿಂದ ಆಯೋಜಿಸಿದ್ದ ಗೃಹಧಾರಿತ ಮಕ್ಕಳ ಪಾಲಕರ ಸಭೆ ಮತ್ತು ಆಲಿಂಕೋ ಸಂಸ್ಥೆಯಿಂದ ಸಲಕರಣೆಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು, ಇಂತಹ ಕಾರ್ಯಕ್ರಮಗಳು ಪಾಲಕರಿಗೆ ಬಹಳಷ್ಟು ಶಕ್ತಿತುಂಬಲಿವೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಮಾತನಾಡಿ, ಲಯನ್ಸ್ ಸಂಸ್ಥೆ ಸಹಕಾರದೊಂದಿಗೆ ಆಸಕ್ತ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಕೊಡಿಸುವುದಾಗಿ ಭರವಸೆ ನೀಡಿದರು.
ವೈದ್ಯಕೀಯ ತಪಾಸಣೆಯಲ್ಲಿ ಶಿಫಾರಸು ಮಾಡಿದ 45 ಮಕ್ಕಳಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಶಿವಮೊಗ್ಗ ಮಾನಸ ಆಸ್ಪತ್ರೆ ವೈದ್ಯರಾದ ಡಾ. ರಾಧಿಕಾ, ಡಾ. ಗಣೇಶ್, ಬಿಇಒ ಏ.ಕೆ.ನಾಗೇಂದ್ರಪ್ಪ, ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಪ್ರಭಾಕರ್ ಬೀರಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಿವಬಸಪ್ಪ, ಸಕ್ಷಮ ಸಂಸ್ಥೆಯ ಜಿಲ್ಲಾ ಸಂಚಾಲಕ ಸಿ.ಆರ್.ಶಿವಕುಮಾರ್, ಪಂಚಾಕ್ಷರಿ ಡಿ.ಎಚ್.ತೀರ್ಥಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net