

ಮಂಡ್ಯ: ಅಂಗವಿಕಲ ವೇತನ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪೈಕಿ ಕೆಲವರ ಆಧಾರ್ ಜೋಡಣೆಯಾಗಿಲ್ಲ. ಅಂತಹ ಫಲಾನುಭವಿಗಳ ವಿವರವನ್ನು ಮಂಡ್ಯ ತಹಸೀಲ್ದಾರ್ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಇನ್ನು 5 ದಿನದೊಳಗೆ ಸಂಬಂಧಪಟ್ಟ ಫಲಾನುಭವಿಯೂ ತಮ್ಮ ವೃತ್ತದ ಗ್ರಾಮ ಆಡಳಿತಾಧಿಕಾರಿ ಮತ್ತು ನಾಡ ಕಚೇರಿ ಹಾಗೂ ತಾಲೂಕು ಕಚೇರಿಗೆ ತಮ್ಮ ಆಧಾರ್ ಕಾರ್ಡ್, ಪಿಂಚಣಿ ಮಂಜೂರಾತಿ ಆದೇಶ ಪ್ರತಿ, ಬ್ಯಾಂಕ್ ಖಾತೆ ಪುಸ್ತಕ ನಕಲು ಪ್ರತಿಯನ್ನು ನೀಡಬೇಕೆಂದು ಪ್ರಕಟಣೆ ತಿಳಿಸಿದೆ.