ವಿಕಲಚೇತನರ ವೇತನ ಮಂಜೂರು ಮಾಡಲು ತಾಂತ್ರಿಕ ಸಮಸ್ಯೆ ನಿವಾರಿಸಲು ಅಂಗವಿಕಲರ ಸಂಘ ಮನವಿ

120520 Yalaburga Disability Association Appeal
Published on

ಯಲಬುರ್ಗಾ: ವಿಕಲಚೇತನರ ವೇತನ ಮಂಜೂರು ಮಾಡಲು ತಾಂತ್ರಿಕ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ತಾಲೂಕು ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಂಘ ತಹಸೀಲ್ದಾರ್ ಶ್ರೀಶೈಲ ತಳವಾರ್‌ಗೆ ಮಂಗಳವಾರ ಮನವಿ ಸಲ್ಲಿಸಿತು.

ಸಂಘದ ಅಧ್ಯಕ್ಷ ಬಸನಗೌಡ ಬನ್ನಪ್ಪಗೌಡ್ರ ಮಾತನಾಡಿ, ಲಾಕ್‌ಡೌನ್ ಜಾರಿಯಿಂದಾಗಿ ಅಂಗವಿಕಲರ ಮಾಸಾಶನ ಸಮರ್ಪಕವಾಗಿ ಅವರವರ ಖಾತೆಗೆ ಜಮೆ ಆಗುತ್ತಿಲ್ಲ. 3-4 ತಿಂಗಳಿಂದಲೂ ತಾಂತ್ರಿಕ ದೋಷದಿಂದ ಅಂಗ ವಿಕಲರಿಗೆ ವೇತನ ಪಾವತಿಯಾಗಿಲ್ಲ. ಬುದ್ಧಿ ಮಾಂದ್ಯರು ಮತ್ತು ಮಾನಸಿಕ ಅಸ್ವಸ್ಥರ ಸಮಸ್ಯೆ ಕೂಡ ತಾಲೂಕಾಡಳಿತ ಅವರಿಗೆ ಪರಿಹಾರ ಒದಗಿಸಲು ಮುಂದಾಗಬೇಕು. ತ್ವರಿತಗತಿಯಲ್ಲಿ ಅಂಗವಿಕಲರ ನಾನಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದರು. ಪದಾಧಿಕಾರಿಗಾಳದ ಮಲ್ಲಪ್ಪ ಹಂದ್ರಾಳ, ಯಂಕರಡ್ಡಿ ರಾಜೂರು, ಕನಕಪ್ಪ ವಜ್ರಬಂಡಿ, ರಾಮಣ್ಣ ಹಿರೇಹಾಳ, ಹನಮಂತಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net