ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು

h14-samarthanam
Published on

ಹುಬ್ಬಳ್ಳಿ: ಇಲ್ಲಿಯ ಲಿಂಗರಾಜ ನಗರದ ಬಿವಿಕೆ ವಿಸಿಬಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಸಮರ್ಥನಂ ಅಂಗವಿಕಲರ ಟ್ರಸ್ಟ್ ವತಿಯಿಂದ ಸ್ಥಾಪನೆಯಾಗಿರುವ ಟಿಂಕರ್ ಇನ್ನೋವೇಷನ್ ಲ್ಯಾಬ್ ಅನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಮುಖ್ಯ ಟ್ರಸ್ಟಿ ಉದಯಕುಮಾರ ಬಾಗುನವರ ಉದ್ಘಾಟಿಸಿ ಮಾತನಾಡಿ, ಅಂಗವೈಕಲ್ಯ ಜೀವನದಲ್ಲಿ ಅಡ್ಡಿಯಾಗದು. ಸಾಧನೆಗೆ ದೇವರು ಕೊಟ್ಟ ಅವಕಾಶವೆಂದು ಪರಿಭಾವಿಸಬೇಕು ಎಂದು ಸಲಹೆ ನೀಡಿದರು.
ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣ ಲಮಾಣಿ ಮಾತನಾಡಿ, ವಿದ್ಯಾರ್ಥಿನಿಯರು ಶಾಲಾ ಹಂತದಿಂದಲೇ ತಂತ್ರಜ್ಞಾನದ ಲಾಭ ಪಡೆಯಬೇಕು ಎಂದರು. ಎಸ್.ಎಸ್. ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಪುಂಡಲೀಕ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಬಾನಾ ಯಲಿಗಾರ, ಬಿ.ಜಿ. ಕುಮಾರಸ್ವಾಮಿ, ಹರ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net