ಅಂಗವಿಕಲರಿಗೆ ಸಮಾನ ಅವಕಾಶ ಕಲ್ಪಿಸಲು ಆದ್ಯತೆ

Disability, Equal Opportunity, Indi, Main Channel of Society, Abida Gadyala, Vitthal Gowda Patila, Rajesh Pawar, SR Nadagaddi,
ಇಂಡಿ ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಎಸಿ ಅಬೀದ ಗದ್ಯಾಳ ಮಾತನಾಡಿದರು.
Published on

ಇಂಡಿ: ಅಂಗವಿಕಲರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಮಾನ ಅವಕಾಶ ಹಾಗೂ ಸೌಲಭ್ಯ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಕಂದಾಯ ಎಸಿ ಅಬೀದ ಗದ್ಯಾಳ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಅಖಿಲ ಕರ್ನಾಟಕ ಅಂಗವಿಕಲರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಗವಿಕಲರು ಯಾರಿಗೂ ಕಮ್ಮಿ ಇಲ್ಲದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗಳ ಮಾಡುತ್ತಿದ್ದಾರೆ. ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಅಂಗವಿಕಲರನ್ನು ಸ್ವಾವಲಂಬಿಗಳಾಗಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಖಾಸಗಿ ಸಂಸ್ಥೆಗಳು ಕೂಡ ಕೈಜೊಡಿಸಬೇಕು ಎಂದರು.

ಶಾಸಕರ ಪುತ್ರ ವಿಠ್ಠಲಗೌಡ ಪಾಟೀಲ, ಅಂತಾರಾಷ್ಟ್ರೀಯ ಕ್ರೀಡಾಪಟು ರಾಜೇಶ ಪವಾರ, ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಆರ್.ನಡಗಡ್ಡಿ, ಅಖಿಲ ಕರ್ನಾಟಕ ಅಂಗವಿಕಲರ ಒಕ್ಕೂಟದ ಇಂಡಿ ಘಟಕದ ಅಧ್ಯಕ್ಷ ಎಸ್.ಎಂ.ಮಕಾನದಾರ, ಪರಸುರಾಮ ಭೋಸಲೆ, ಶಿವಲಿಂಗಪ್ಪ ನಾಯ್ಕೋಡಿ, ಪ್ರಕಾಶ ಐರೋಡಗಿ, ಬಸವರಾಜ ಗೊರನಾಳ ಮಾತನಾಡಿದರು.

ಬಾಬುಶಾ ಹೊಸಮನಿ, ಸಿದ್ದಪ್ಪ ಗುಲೆ, ಪುಂಡಲೀಕ ಪೂಜಾರಿ, ಮಹಾನಂದಾ ಬಂಡಿವಡ್ಡರ, ಶ್ರೀದೇವಿ ಹಳಕೆ, ಕಲಾವತಿ ಹುಳ್ಳೆ, ಶಿವಕಾಂತವ್ವ ಕುಂಬಾರ, ಜ್ಞಾನೇಶ್ವರ ಠೋಕೆ, ನಿಂಗರಾಜ ಬಿಸನಾಳ, ಪಾಂಡು ರಾಠೋಡ, ಮಲ್ಲಪ್ಪ ಬನಸೋಡೆ, ಬಾಬು ಸಂಗೋಗಿ, ಭರಮಲಿಂಗ ಪೂಜಾರಿ, ಅಮಸಿದ್ದ ಬಗಲಿ, ರೇಖಾ ಕ್ಷತ್ರಿ, ಶಿವಾನಂದ ನಾಗರಹಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net