

ಕಂಪ್ಲಿ: ರೈತರಿಗೆ ಮೆಣಸಿನಕಾಯಿ ಬೆಳೆಯ ಕೊಳೆ ರೋಗಕ್ಕೆ ಸಾವಯವ ಔಷಧ ಸಿಂಪಡಣೆ ಫಲಿತಾಂಶ ಕುರಿತ ಪ್ರಾತ್ಯಕ್ಷಿಕೆ ರೈತ ರಾಮಕೃಷ್ಣರ ಮೆಣಸಿನ ತೋಟದಲ್ಲಿ ಶನಿವಾರ ನಡೆಯಿತು.
ವಿಜ್ಞಾನಿ ಸುನಿಲ್ ಎಚ್.ನಾಯಕ್ ಮಾತನಾಡಿ, ಮೆಣಸಿನಕಾಯಿ ಸಿಜೆಂಟಾ ತಳಿ ನಾಟಿಯಾದ ಹತ್ತು ದಿನಗಳ ನಂತರ ಐಪಿಎಲ್ ಬಯಾಲಾಜಿಕಲ್ ಬಯೋಹರ್ಜ್ (ಟ್ರೈಕೋಡರ್ಮಾ ಹರ್ಜೇನಿಯಂ)ಸಿಂಪಡಣೆ ಮಾಡಿದ್ದು, ಸಸಿಗಳು ಚೇತರಿಸಿಕೊಂಡಿದ್ದಲ್ಲದೆ, ಕೊಳೆ ರೋಗ ಬಾಧೆಯಿಂದ ನಿಯಂತ್ರಣಗೊಂಡಿವೆ.
ಇದನ್ನು ಓದಿ: ಸರ್ಕಾರಕ್ಕೆ ಕೊಳೆ ರೋಗ ಬಂದಿದೆ!
ಇದರಿಂದ ಸಸಿಗಳ ಬೆಳವಣಿಗೆ ಉತ್ತಮಗೊಳ್ಳುವುದಲ್ಲದೆ, ಅಧಿಕ ಇಳುವರಿ ದೊರಕಲಿದೆ. ಟ್ರೈಕೋಡರ್ಮಾ ಹರ್ಜೇನಿಯಂ ಸಿಂಪಡಿಸಿದ ಸಸಿಗಳ ಬೆಳವಣಿಗೆ ಕುಂಠಿತಗೊಂಡಿರುವ ವ್ಯತ್ಯಾಸ ಗಮನಿಸಬೇಕು.ಕೊಳೆ ರೋಗಕ್ಕೆ ಸಾವಯವ ಔಷಧ ರಾಮಬಾಣವಾಗಿದೆ ಎಂದು ವಿದ್ಯಾರ್ಥಿಗಳಿಗೆ, ರೈತರಿಗೆ ಪ್ರಾತ್ಯಕ್ಷಿತೆ ಮೂಲಕ ತೋರಿಸಿಕೊಟ್ಟರು.
ಕೃಷಿ ಅಧಿಕಾರಿ ಶಿವಪ್ಪ ಬಾರಿಗಿಡದ, ಟಿಎಂ ಆದಿನಾರಾಯಣ, ಎಂಡಿಓ ಎನ್.ಸಾಯಿಕುಮಾರ್, ರೈತರಾದ ರಾಮಕೃಷ್ಣ, ಆಂಜನೇಯ, ರಾಮಾಂಜನೇಯ, ನರಸಿಂಹಲು, ರಮೇಶ, ಪುಲ್ಲಯ್ಯ ಸೇರಿ ತರಬೇತಿ ವಿದ್ಯಾರ್ಥಿಗಳಿದ್ದರು.