

ಪಾಂಡವಪುರ: ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ನೂತನ ಆಡಳಿತ ಮಂಡಳಿಯ 31 ನಿರ್ದೇಶಕ ಸ್ಥಾನಗಳಿಗೆ ಶಿಕ್ಷಕರ ಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲ ಇಲಾಖೆಗಳ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾದರು.
ಶಿಕ್ಷಕರ ಕ್ಷೇತ್ರದ 4 ನಿರ್ದೇಶಕ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಎರಡು ಬಣಗಳಿಂದ ತಲಾ ಇಬ್ಬರು ಚುನಾಯಿತರಾದರು. ಸರ್ಕಾರಿ ನೌಕರರ ಸಂಘಕ್ಕೆ ಆರೋಗ್ಯ, ಕಂದಾಯ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ತಾಪಂ ಸೇರಿದಂತೆ ವಿವಿಧ ಇಲಾಖೆಗಳಿಂದ ಆಯ್ಕೆಯಾಗುವ 31 ನಿರ್ದೇಶಕ ಸ್ಥಾನಗಳಿಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದ ನಾಲ್ಕು ಸ್ಥಾನಗಳನ್ನು ಹೊರತುಪಡಿಸಿ ಉಳಿದೆಲ್ಲ 27 ಸ್ಥಾನಗಳಿಗೆ ನಿರ್ದೇಶಕರು ಅವಿರೋಧ ಆಯ್ಕೆಯಾದರು.
ಪ್ರಾಥಮಿಕ ಶಾಲೆಗಳ ಶಿಕ್ಷಕರ ಕ್ಷೇತ್ರದ ನಾಲ್ಕು ನಿರ್ದೇಶಕ ಸ್ಥಾನಗಳಿಗೆ ಎಂಟು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ 4 ನಿರ್ದೇಶಕ ಸ್ಥಾನಗಳಿಗೆ ನಿವೃತ್ತ ಪ್ರೌಢಶಾಲಾ ಶಿಕ್ಷಕ ಎಚ್.ಸಿ.ಶಿವಪ್ಪ ಚುನಾವಣಾಧಿಕಾರಿಯಾಗಿ ಮತದಾನ ನಡೆಸಿಕೊಟ್ಟರು. ಚುನಾವಣಾ ಕಣದಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತು ಪರಮೇಶ್ ಬಣದ ಎಂ.ಡಿ.ಕುಮಾರ್, ಎಸ್.ಎನ್.ಕೆಂಪೇಗೌಡ, ಬಿ.ಎಂ.ನಾಗೇಗೌಡ, ಕೆ.ಎಂ.ಪುಟ್ಟರಾಜೇಗೌಡ ಹಾಗೂ ಚಂದ್ರಶೇಖರ್ ಬಣದಿಂದ ಕೆ.ಯುವರಾಜು, ಎಂ.ಕೆ.ಕರುಣಾಕರ, ವಿಜಯಕುಮಾರ್ ಮತ್ತು ಬಿ.ವಿ.ಕೀರ್ತಿ ಇದ್ದರು.
ಪಟ್ಟಣದ ಫ್ರೆಂಚ್‌ರಾಕ್ಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲೆಗಳ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 436 ಮತಗಳಲ್ಲಿ 430 ಮತಗಳು ಚಲಾವಣೆಗೊಂಡವು. ನಂತರ ನಡೆದ ಎಣಿಕೆ ಪ್ರಕ್ರಿಯೆಯಲ್ಲಿ ಕೆ.ಯುವರಾಜ್.ಕೆ-262, ಎಂ.ಡಿ.ಕುಮಾರ್-246, ಕುರುಣಕುಮಾರ್-239 ಹಾಗೂ ಎಸ್.ಎನ್.ಕೆಂಪೇಗೌಡ-239 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಇದರಲ್ಲಿ 2 ಮತಗಳ ತಿರಸ್ಕೃತಗೊಂಡವು.
ಅವಿರೋಧ ಆಯ್ಕೆ: ಸರ್ಕಾರಿ ನೌಕರರ ಸಂಘದ ವಿವಿಧ ಇಲಾಖೆಗಳಿಂದ 27 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ಪ್ರೌಢಶಾಲಾ ವಿಭಾಗದಿಂದ- ಎಂ.ಜಯರಾಮ್, ಕೃಷಿ ಇಲಾಖೆಯಿಂದ- ಎಚ್.ಗಿರೀಶ್, ಪಶುಸಂಗೋಪನೆ ಇಲಾಖೆ- ಎಸ್.ಶ್ರೀಧರ್, ಕಂದಾಯ ಇಲಾಖೆ- ಗುರುಮೂರ್ತಿ, ಸಂಜೀವ್‌ರಾಥೋಡ್, ಹೇಮಾವತಿ ನೀರಾವರಿ ನಿಗಮ-ಸಿ.ಲೋಕೇಶ್, ಜಿಲ್ಲಾ ಪಂಚಾಯಿತಿ- ರಮ್ಯಶ್ರೀ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ- ಪಿ.ಎಸ್.ರೇವಣ್ಣ, ಪದವಿ ಪೂರ್ವ ಕಾಲೇಜು ವಿಭಾಗ- ಎಚ್.ಎನ್.ರಾಮಕೃಷ್ಣೇಗೌಡ, ಹಿಂದುಳಿದ ವರ್ಗ ಇಲಾಖೆ(ಬಿಸಿಎಂ)- ಸಿ.ನಂದಕುಮಾರ್, ಸಮಾಜಕಲ್ಯಾಣ ಇಲಾಖೆ- ಎನ್.ಜೆ.ಜಯರಾಮ್, ಆರೋಗ್ಯ ಇಲಾಖೆ- ಡಾ.ಸಿ.ಎ.ಅರವಿಂದ್, ಕೆ.ಮಂಜುನಾಥ್, ಟಿ.ಆರ್.ರಾಮಚಂದ್ರ. ಮಧುಸೂದನ್, ಅರಣ್ಯ ಇಲಾಖೆ- ಎಂ.ಸಿ.ಯೋಗೇಶ್, ರೇಷ್ಮೆ- ರವಿಕುಮಾರ್, ತೋಟಗಾರಿಕೆ- ಎನ್.ಪ್ರಸನ್ನ, ಖಜಾನೆ ಇಲಾಖೆ-ನಾಗರಾಜು, ಸರ್ವೇ ಇಲಾಖೆ- ಟಿ.ಆರ್.ಭಾಸ್ಕರ್, ಕಾನೂನು ಇಲಾಖೆ- ಎಂ.ಎನ್.ವೇಣುಗೋಪಾಲ, ತಾಲೂಕು ಪಂಚಾಯಿತಿ- ಡಿ.ಪಿ.ಕುಮಾರ, ಎಚ್.ಪಿ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- ಕೆ.ಆರ್.ಪೂರ್ಣಿಮಾ, ಅಬಕಾರಿ- ಡಿ.ಜಿ.ದಿಲೀಪ್‌ಕುಮಾರ್, ಸಹಕಾರ ಸಂಘ- ಎಚ್.ಎಂ.ಶೋಭಾ. ಸರ್ಕಾರಿ ಐಟಿಐ ಕಾಲೇಜಿನಿಂದ ಬಿ.ಸಿದ್ದರಾಜು ಅವಿರೋಧವಾಗಿ ಆಯ್ಕೆಯಾದರು. ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನ.16ರಂದು ನಡೆಯಲಿದೆ.