

ನ್ಯಾಮತಿ: ಇಂದಿನ ಯುವ ಸಮುದಾಯ ಕೌಶಲದಲ್ಲಿ ಅಭಿವೃದ್ಧಿ ಹೊಂದಲು ತಾಂತ್ರಿಕ ವಿಭಾಗದಲ್ಲಿ ನೈಪುಣ್ಯ ಪಡೆದುಕೊಂಡರೆ ಆರ್ಥಿಕ ಸಬಲತೆ ಸಾಧಿಸಬಹುದು ಎಂದು ಕೆನರಾ ಬ್ಯಾಂಕ್ ಹೊಳಲೂರು ನಿರ್ದೇಶಕ ಕಾಂತೇಶ್ ಅಂಬಿಗೇರ್ ಹೇಳಿದರು.
ಪಟ್ಟಣದ ಹೊರವಲಯದ ಅನ್ನಪೂರ್ಣಮ್ಮ ಶಂಕರಪ್ಪ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆ ಶಿವಮೊಗ್ಗ(ಹೊಳಲೂರು), ಜೆಸಿಐ ಶಿವಮೊಗ್ಗ ಅನಿಕೇತನ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ಯುವಕರ ಸಬಲೀಕರಣಕ್ಕೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸಂಸ್ಥೆಯ ಸಹಕಾರದಲ್ಲಿ ತರಬೇತಿ ಪಡೆದ ಯುವಕ, ಯುವತಿಯರು ಸ್ವಂತ ಉದ್ಯೋಗ ನಿರ್ವಣಕ್ಕೆ ಸಹಕರಿಸಲಾಗುವುದು ಎಂದರು.
ಜೆಸಿಐ ಅನಿಕೇತನ ಅಧ್ಯಕ್ಷ ಎಂ.ಎಸ್. ರಾಜು, ಕಾರ್ಯದರ್ಶಿ ಎಂ.ವಿ. ನಾಗರಾಜ್, ನಿರ್ದೇಶಕರಾದ ಬಿ.ಎನ್. ಹರೀಶ್, ಮಧುಸೂದನ್, ಗಣೇಶ್, ಮುದಿಗೌಡಪ್ಪ, ಜಿ.ಎಸ್. ಶಾಂಭವಿ, ಪ್ರಾಚಾರ್ಯರಾದ ಎಚ್.ಕೆ. ರಾಜು, ಪ್ರಕಾಶ್, ಸಿಬ್ಬಂದಿ ಇದ್ದರು.