ಕಡೂರು ಪಿಕಾರ್ಡ್ ಬ್ಯಾಂಕ್​ನಲ್ಲಿ ಬಿಜೆಪಿ ಬೆಂಬಲಿತರ ಗೆಲುವು

web 1
Published on

ಕಡೂರು: ಪಟ್ಟಣದ ಪಿಕಾರ್ಡ್ ಬ್ಯಾಂಕ್​ನ ನಾಲ್ಕು ನಿರ್ದೇಶಕ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕರು ಆಯ್ಕೆಯಾದರು.

ನಾಲ್ಕು ನಿರ್ದೇಶಕ ಸ್ಥಾನಗಳಿಗೆ ಮಾ.22ರಂದು ನಿಗದಿಯಾಗಿದ್ದ ಚುನಾವಣೆ ಕರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಶನಿವಾರ ಚೌಳಹಿರಿಯೂರು, ಬೀರೂರು, ಮತಿಘಟ್ಟ ಹಾಗೂ ಸಖರಾಯಪಟ್ಟಣ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಚುನಾವಣೆ ನಡೆಸಲಾಯಿತು.

ಚೌಳಹಿರಿಯೂರು ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕಲ್ಲೇಶಪ್ಪ (11) ಮತ ಪಡೆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕುರುಬರಹಳ್ಳಿ ಯೋಗೀಶಪ್ಪ (30) ಮತ ಪಡೆದು ಗೆಲುವು ಸಾಧಿಸಿದರು. ಸಖರಾಯಪಟ್ಟಣ ಕ್ಷೇತ್ರದ ಬಿಜೆಪಿ ಬೆಂಬಲಿತ ಯತೀಶ್ (32) ಮತ ಪಡೆಯುವ ಕಾಂಗ್ರೆಸ್ ಬೆಂಬಲಿತ ಷಡಾಕ್ಷರಪ್ಪ (2) ವಿರುದ್ಧ ಗೆಲುವು ಪಡೆದರು. ಕುತೂಹಲ ಕೆರಳಿಸಿದ್ದ ಮತಿಘಟ್ಟ ಕ್ಷೇತ್ರದ ಬಿಜೆಪಿ ಬೆಂಬಲಿತ ನಟರಾಜ್(101) ಮತ ಪಡೆದು ಕಾಂಗ್ರೆಸ್ ಬೆಂಬಲಿತ ಅಜೆಯ್ ಒಡೆಯರ್(49) ಅವರನ್ನು ಪರಾಭವಗೊಳಿಸಿದರು. ಬೀರೂರು ಕ್ಷೇತ್ರದ ಬಿಜೆಪಿ ಬೆಂಬಲಿತ ತಿಮ್ಮೇಗೌಡ (12) ಮತ ಪಡೆದು ಕಾಂಗ್ರೆಸ್ ಬೆಂಬಲಿತ ಗೋಂವಿದಪ್ಪ (6) ಅವರನ್ನು ಪರಾಭವಗೊಳಿಸಿದರು.

ಪಿಕಾರ್ಡ್ ಬ್ಯಾಂಕ್​ನ 14 ನಿರ್ದೇಶಕ ಸ್ಥಾನಗಳಲ್ಲಿ 10 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದು ಉಳಿದ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಬಲಿತರು ಆಯ್ಕೆಯಗುವ ಮೂಲಕ ಕಡೂರು ಪಿಕಾರ್ಡ್ ಬ್ಯಾಂಕ್ ಆಡಳಿತ ಇದೇ ಮೊದಲ ಬಾರಿಗೆ ಬಿಜೆಪಿ ಬೆಂಬಲಿತರ ತೆಕ್ಕೆಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net