ಯುವ ಕಥೆಗಾರರಿಂದ ಕಥಾಲೋಕ ಶ್ರೀಮಂತ :ನಿರ್ದೇಶಕ ಅರವಿಂದ ಕುಪ್ಲೀಕರ್ ಮೆಚ್ಚುಗೆ

kathe
Published on

ಬೆಂಗಳೂರು: ಯುವ ಲೇಖಕರು ಕನ್ನಡದ ಕಥಾಲೋಕವನ್ನು ಶ್ರೀಮಂತಗೊಳಿಸುತ್ತಿದ್ದಾರೆ ಎಂದು ನಿರ್ದೇಶಕ ಅರವಿಂದ ಕುಪ್ಳೀಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಲಾಗ್ರಾಮದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಿ. ಪ್ರವೀಣ್ ಕುಮಾರ್ ರಚಿಸಿರುವ ‘ ಬಯಲು’ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಥೆ ಕಟ್ಟುವಿಕೆ ಎಲ್ಲ ವೈವಿಧ್ಯತೆಯಿಂದ ಕೂಡಿವೆ. ‘ಬಯಲು’ ಸಂಕಲನದಲ್ಲಿನ ಕಥೆಗಳು ಶ್ರೀಮಂತಿಕೆಯಿಂದ ಕೂಡಿವೆ. ತಲ್ಲಣ, ಗುಡ್ಡದವ್ವ ಕಥೆ ಹಲವು ಪ್ರಶ್ನೆ ಹುಟ್ಟುಹಾಕುತ್ತವೆ. ಬಯಲು, ಜಾರುಬಂಡೆ ಕಥೆಗಳು ಸಮಾಜದ ಸಂಕೀರ್ಣತೆ ಬಗ್ಗೆ ಚೆನ್ನಾಗಿ ಕಟ್ಟಿಕೊಟ್ಟಿವೆ ಎಂದರು.

ಬರಹಗಾರ್ತಿ ಜಯಲಕ್ಷ್ಮೀ ಪಾಟೀಲ್ ಮಾತನಾಡಿ, 10 ಕಥೆಗಳು ರೊಟ್ಟಿಯಂತೆ ಸಿಹಿಯಾಗಿವೆ. ಎಲ್ಲ ಬಗೆಯ ವಿಷಯಗಳಿವೆ. ಜಾರುಬಂಡೆ ಕಥೆಯನ್ನು ಸಿನಿಮಾ ಮಾಡಬಹುದು. ಆಸ್ಕರ್ ಮಟ್ಟದ ಪ್ರಶಸ್ತಿ ಪಡೆಯುವ ಶಕ್ತಿ ಆ ಕಥೆಗೆ ಇದೆ.ಸಮಾಜದ ಎಲ್ಲರನ್ನು ವಿಶಿಷ್ಟ ಕೋನಗಳಿಂದ ನೋಡುವ ಕಥೆ ಇದು. ಕನ್ನಡ ಪದ ಬಳಕೆ ಗಮನ ಸೆಳೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net