ಫೆ.27ರಂದು ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕುರಿತ ‘ಡೈರೆಕ್ಟ್ ಆ್ಯಕ್ಷನ್’ ನಾಟಕ ಪ್ರದರ್ಶನ: ಸಾಮಾಜಿಕ ಹೋರಾಟಗಾರ ಡಾ.ಎಚ್.ಎನ್.ರವೀಂದ್ರ ಮಾಹಿತಿ

Director Action Drama Performance mandya
Published on

ಮಂಡ್ಯ: ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟದ ಕುರಿತ ‘ಡೈರೆಕ್ಟ್ ಆ್ಯಕ್ಷನ್ ನಾಟಕ ಪ್ರದರ್ಶನ’ ಫೆ.27ರಂದು ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಡಾ.ಎಚ್.ಎನ್.ರವೀಂದ್ರ ಹೇಳಿದರು.

ಜಿಲ್ಲೆಯ ವಿವಿಧ ಸಂಘಟನೆಗಳ ಒಕ್ಕೂಟದಿಂದ ನಗ್ನ ಥಿಯೇಟರ್ ಭವ-ನಾದ ಅರ್ಪಿಸುವ ನಟರಾಜ್ ಹುಳಿಯಾರ್ ರಚನೆಯಲ್ಲಿ ಕಬಡ್ಡಿ ನರೇಂದ್ರಬಾಬು ನಿರ್ದೇಶನ ಮಾಡಿದ್ದಾರೆ. ಎಂ.ಡಿ.ನಂಜುಂಡಸ್ವಾಮಿ ಅವರ ಪಾತ್ರದಲ್ಲಿ ಸಂಪತ್ ಮೈತ್ರೇಯ ಅಭಿನಯಿಸಲಿದ್ದಾರೆ. ಅಂದು ಸಂಜೆ 6 ಗಂಟೆಗೆ ಪ್ರದರ್ಶನ ಪ್ರಾರಂಭವಾಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದು 11ನೇ ಪ್ರದರ್ಶನವಾಗಿದೆ. ಪ್ರವೇಶ ಶುಲ್ಕ 100 ರೂ ನಿಗದಿಪಡಿಸಲಾಗಿತ್ತು. ಆದರೆ ಎಲ್ಲರೂ ನೋಡಬೇಕೆಂಬ ಉದ್ದೇಶದಿಂದ ಶುಲ್ಕವನ್ನು ಕಡ್ಡಾಯಗೊಳಿಸಿಲ್ಲ. ಸ್ವಯಂಪ್ರೇರಿತರಾಗಿ ದೇಣಿಗೆ ಕೊಟ್ಟರೆ ಪಡೆದುಕೊಳ್ಳಲಾಗುವುದು. ಇನ್ನು ಕಲಾವಿದರಿಗೆ ಗೌರವಧನವನ್ನು ನಾವೇ ಭರಿಸಲಿದ್ದೇವೆ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟದ ಹಾದಿಯನ್ನು ಪ್ರತಿಯೊಬ್ಬರೂ ನೋಡಲೇಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಅವರ ಬಗ್ಗೆ ತಿಳಿದುಕೊಳ್ಳಬೇಕು. ಆದ್ದರಿಂದ ಎಲ್ಲ ವರ್ಗದವರೂ ಕೂಡ ಆಗಮಿಸಬೇಕೆಂದು ಮನವಿ ಮಾಡಿದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶಂಭೂನಹಳ್ಳಿ ಕೃಷ್ಣ, ಎಂ.ಬಿ.ನಾಗಣ್ಣಗೌಡ, ಪಿ.ಕೆ.ನಾಗಣ್ಣ, ಸೋಮು ಸ್ವರ್ಣಸಂದ್ರ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net