ನೌಕರರ ಕುಂದುಕೊರತೆ ಬಗೆಹರಿಸಲು ಸೂಚನೆ

KSRTC UNION
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ವಿವಿಧ ಕಾರ್ವಿುಕ ಸಂಘಟನೆಗಳ, ನೌಕರರ ಸಂಘಗಳ ಪದಾಧಿಕಾರಿಗಳೊಂದಿಗೆ ಕುಂದುಕೊರತೆ ಸಭೆ ನಡೆಯಿತು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಕುಂದುಕೊರತೆಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕೆಎಸ್​ಆರ್​ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡೆರೇಶನ್ ಪ್ರಧಾನ ಕಾರ್ಯದರ್ಶಿ ವಿಜಯಬಾಸ್ಕರ, ಉಪಾಧ್ಯಕ್ಷ ಆರ್ ಎಫ್. ಕವಳಿಕಾಯಿ, ನೌಕರರ ಭವಿಷ್ಯನಿಧಿ ಧರ್ಮದರ್ಶಿ ಎಂ. ಎ. ಭಗವತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ದ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಆರ್., ಕಾರ್ಯಾಧ್ಯಕ್ಷ ವಿರೇಶ ಪೂಜಾರ ಹಾಗೂ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಸಂಸ್ಥೆಯ ಹಿರಿಯ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಪಿ. ವೈ. ನಾಯಕ, ವಿಜಯಶ್ರೀ ನರಗುಂದ, ಪ್ರಸನ್ನಕುಮಾರ ಬಾಳಾನಾಯಕ, ಬಸವರಾಜ ಅಮ್ಮನವರ, ದಿವಾಕರ ಯರಗೊಪ್ಪ, ಜಗದಂಬಾ ಕೋಪರ್ಡೆ, ಇಸ್ಮಾಯಿಲ್ ಕಂದಗಲ್, ಶ್ರೀನಾಥ ಜಿ. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net