

ವಿಜಯಪುರ : ನಗರದ ಬಿಎಲ್ಡಿಇ ಡಿಮ್ಡ್ ವಿವಿಯ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿ&ಎಆರ್ಕೆ) ಯೋಜನೆಯಡಿ ರೋಗಿಗಳು (ಎಬಿ&ಎಆರ್ಕೆ) ಪ್ಯಾಕೇಜ್ಗಳಲ್ಲಿ 900 (3ಎ) ಕೋಡ್ಗಳು ಮತ್ತು 254 (2ಬಿ) ಕೋಡ್ಗಳಲ್ಲಿ ಬರುವ ಕಾಯಿಲೆಗಳಿಗೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಂದ ಶಿಫಾರಸು ಇಲ್ಲದೇ ನೇರವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಈ ಮುಂಚೆ ಈ ಸ್ಕೀಮ್ನಡಿ ನವಜಾತ ಶಿಶುಗಳ ತೀವ್ರ ನಿಗಾ ಟಕಗಳು, ಕಾರ್ಡಿಯೋಥೊರಾಸಿಕ್ ಮತ್ತು ಪ್ಲಾಸ್ಟಿಕ ಸರ್ಜರಿ, ಹೃದ್ರೋಗ, ನರಶಸ ಚಿಕಿತ್ಸೆ, ಸಂಕೀರ್ಣ ಮೂಳೆ ಶಸ ಚಿಕಿತ್ಸೆಗಳ ವಿಶೇಷತೆಗಳಿಗಾಗಿ 2ಬಿ ಆ ಮತ್ತು 3ಎ ನ ಎಲ್ಲ ಕೋಡ್ಗಳ ಅಡಿ ಕಾರ್ಯವಿಧಾನಗಳಿಗೆ ಸೇವೆಗಳನ್ನು ಪಡೆಯಲು ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಯಗಳಿಂದ ಶಿಫಾರಸು ಪತ್ರ ಪಡೆದು ತರಬೇಕಿತ್ತು. ಸದ್ಯ, ಸರ್ಕಾರ ಈ ಕೋಡ್ಗಳ ಅಡಿ ಬರುವ ಕಾಯಿಲೆಗಳಿಗೆ ಬಿಎಲ್ಡಿಇ ಆಸ್ಪತ್ರೆಯಲ್ಲಿ ನೇರವಾಗಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕಿಯ ಅಧಿಕ ಡಾ. ಆರ್.ಎಂ. ಹೊನ್ನುಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.