ಗ್ರಾಹಕರಿಗೆ ನೇರ ಮಾರಾಟದಿಂದ ಹೆಚ್ಚು ಲಾಭ

5sri-1
ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಆಯೋಜಿಸಿದ್ದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆಯನ್ನು ಶುಭಾಷಿಣಿ ತಿಮ್ಮಪ್ಪ ಉದ್ಘಾಟಿಸಿದರು. ಮಸಿಗೆ ಅಶೋಕ್, ರಾಜೇಶ್, ಸೌಮ್ಯಾ, ಸಿಂಚನಾ ಇತರರಿದ್ದರು.
Published on

ಶೃಂಗೇರಿ: ತಾವು ಸಿದ್ಧಪಡಿಸಿದ ವಸ್ತುವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಉತ್ಪಾದಕರಿಗೆ ಹೆಚ್ಚು ಲಾಭ ದೊರಕುತ್ತದೆ ಎಂದು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶುಭಾಷಿಣಿ ತಿಮ್ಮಪ್ಪ ಹೇಳಿದರು.

ತಾಲೂಕಿನ ಮೆಣಸೆಯ ಹಾಲಂದೂರು ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಂಜೀವಿನಿ ಒಕ್ಕೂಟ ಮಾಸಿಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸದೃಢಗೊಳ್ಳಲು ಮಾಸಿಕ ಸಂತೆ ಸಹಕಾರಿಯಾಗುತ್ತದೆ. ಒಕ್ಕೂಟದಿಂದ ಪ್ರತಿ ತಿಂಗಳು ಮಹಿಳೆಯರು ತಾವು ಉತ್ಪಾದಿಸಿದ ವಸ್ತುವನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಹಾಲಂದೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮಸಿಗೆ ಅಶೋಕ್ ಮಾತನಾಡಿ, ಮಹಿಳೆಯರು ವ್ಯಾಪಾರ ವ್ಯವಹಾರ ನಡೆಸಲು ಸಾರ್ವಜನಿಕರು ವಸ್ತುವನ್ನು ಕೊಳ್ಳುವುದರ ಮೂಲಕ ಪ್ರೋತ್ಸಾಹಿಸಬೇಕು. ಸಂಘದ ಆವರಣದ ಮಾಸಿಕ ಸಂತೆ ನಡೆಸಲು ಸೂಕ್ತ ಸ್ಥಳವಾಗಿದೆ. ಸಹಕಾರ ಸಂಘದಿಂದ ಮಹಿಳೆಯರ ವ್ಯಾಪಾರ, ವ್ಯವಹಾರ ನಡೆಸಲು ಅನುಕೂಲ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಮಾಸಿಕ ಸಂತೆಯಲ್ಲಿ ಗ್ರಾಮೀಣ ಪ್ರದೇಶದಿಂದ ಬಂದ 30ಕ್ಕೂ ಹೆಚ್ಚು ಮಳಿಗೆ ಮೂಲಕ ಮಹಿಳೆಯರು ವ್ಯಾಪಾರ ನಡೆಸಿದರು. ಹಾಲಂದೂರು ಪಿಎಸಿಎಸ್ ಅಧ್ಯಕ್ಷ ರಾಜೇಶ್, ನಿರ್ದೇಶಕರಾದ ಮೇಗಳಬೈಲು ಚಂದ್ರಶೇಖರ್, ನಟರಾಜ್, ಮೆಣಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯ್ಕ, ಸದಸ್ಯೆ ಸುಷ್ಮಾ ಸುರೇಂದ್ರ, ರಮೇಶ್, ಒಕ್ಕೂಟದ ಉಪಾಧ್ಯಕ್ಷೆ ಶಾಂತಾ, ಸುನೀತಾ ಪ್ರಭು, ಕುಸುಮಾ ಪ್ರಭಾಕರ್, ಸೌಮ್ಯಾ, ಸಿಂಚನಾ, ಕಾರ್ಯಕ್ರಮ ವ್ಯವಸ್ಥಾಪಕ ಆದರ್ಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net