

ಮಂಡ್ಯ: ಕೆ.ಎಸ್.ವರ್ಲ್ಡ್ ವೆಂಚರ್ಸ್, ಟೆಕ್ ಮಹಿಂದ್ರಾ ಫೌಂಡೇಷನ್, ಸಮರ್ಥನಂ ಟ್ರಸ್ಟ್, ಐ ಪ್ರೊಸೆಸ್ ಸರ್ವಿಸ್ ಇಂಡಿಯಾ ಪ್ರೈ ಲಿ, ಮತ್ತು ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಮಾ.7ರಂದು ನೇಮಕಾತಿ ಆಯೋಜಿಸಲಾಗಿದೆ.
18 ರಿಂದ 35 ವರ್ಷದೊಳಗಿನವರು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲಾತಿಯೊಂದಿಗೆ ಅಂದು ಬೆಳಗ್ಗೆ 10ಗಂಟೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಿರುವ ಸಂದರ್ಶನದಲ್ಲಿ ಭಾಗವಹಿಸಬಹುದು. ಮಾಹಿತಿಗೆ ದೂ.ಸಂ 08232-295124, ಮೊ.ಸಂ 9164642684 ಮತ್ತು 8970646629 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.