

ಮಂಡ್ಯ: ಉದ್ಯೋಗ ನೀಡುವ ಸಂಬಂಧ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜ.12ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.
ಬಂಧನ್ ಬ್ಯಾಂಕ್, ಎಂ.ಪಿ ಗಾಡಿರ್ಂಗ್ ಸಲ್ಯೂಷನ್ಸ್, ಶಾಹಿ ಎಕ್ಸ್ಪೋರ್ಟ್, ಪೇಟಿಎಂ ಸರ್ವೀಸಸ್, ಆದರ್ಶ್ ಕಿಯಾ ಮತ್ತು ಸರ್ವಿಸ್ ಜಂಕ್ಷನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂದರ್ಶನ ನಡೆಯಲಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೋಮೊ, ಯಾವುದೇ ಪದವಿ(ಬಿ.ಇ ಹೊರತುಪಡಿಸಿ) ಹಾಗೂ ಎಂಬಿಎ ಉತ್ತೀರ್ಣರಾಗಿರುವ 18 ರಿಂದ 35 ವಷರ್ದೊಳಗಿನ ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಸಂಗಕ್ಕೆ ಸಂಬಂಧಿಸಿದ ದಾಖಲೆಯೊಂದಿಗೆ ಅಂದು ಬೆಳಗ್ಗೆ 10.30ಕ್ಕೆ ಹಾಜರಾಗಬಹುದು. ಮಾಹಿತಿಗೆ ದೂ.ಸಂ 08232-295124 ಅಥವಾ ಮೊ.ಸಂ 8660061488 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.