ಸೆ.8ರಂದು ಮಂಡ್ಯ ನಗರದಲ್ಲಿ ನೇರ ಸಂದರ್ಶನ

Job
Published on

ಮಂಡ್ಯ: ನಗರದ ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರದಲ್ಲಿ ಸೆ.8ರಂದು ಬೆಳಗ್ಗೆ 10.30ಕ್ಕೆ ವಿವಿಧ ಹುದ್ದೆಗೆ ಪೇಟಿಎಂ ಸಂಸ್ಥೆಯಿಂದ ನೇರ ಸಂದರ್ಶನ ಆಯೋಜಿಸಲಾಗಿದೆ.

ಎಸ್‌ಎಸ್‌ಎಲ್‌ಸಿ(ಉತ್ತೀರ್ಣ) ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ ಆಸಕ್ತರು 2 ಭಾವಚಿತ್ರ, ಸ್ವವಿವರ, ವಿದ್ಯಾರ್ಹತೆ ಪ್ರತಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಭಾಗವಹಿಸಬಹುದು. ವಿವರಕ್ಕೆ ಮೊ.ಸಂ 08232-295124 ಅಥವಾ ಮೊ.ಸಂ 9164642684 ಯನ್ನು ಕಚೇರಿ ವೇಳೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net