ಶ್ರೀಕಾಮರ್ಸ್ ಮಾರ್ಕೆಟ್ ಸರ್ವಿಸ್ ಪ್ರೈ ಲಿ ಕಂಪನಿಯಲ್ಲಿ 20 ಹುದ್ದೆ ಖಾಲಿ: ಜೂ.15ರಂದು ನಗರದಲ್ಲಿ ನೇರ ಸಂದರ್ಶನ

job new
Published on

ಮಂಡ್ಯ: ಶ್ರೀಕಾಮರ್ಸ್ ಮಾರ್ಕೆಟ್ ಸರ್ವಿಸ್ ಪ್ರೈ ಲಿ ಕಂಪನಿಯಲ್ಲಿ ಖಾಲಿ ಇರುವ ರಿಲೇಷನ್‌ಶಿಪ್ ಎಕ್ಸಿಕ್ಯೂಟಿವ್, ರಿಲೇಷನ್‌ಶಿಪ್ ಆಫೀಸರ್ ಮತು ಸೀನಿಯರ್ ರಿಲೇಷನ್‌ಶಿಪ್ ಆಫೀಸರ್ 20 ಹುದ್ದೆ ನೇಮಕಾತಿಗೆ ಜೂ.15ರಂದು ಇಲ್ಲಿನ ನೆಹರುನಗರ 1ನೇ ಕ್ರಾಸ್‌ನಲ್ಲಿರುವ ಶ್ರೀಕಾಮರ್ಸ್ ಮಾರ್ಕೆಟ್ ಸರ್ವಿಸ್ ಪ್ರೈ ಲಿ ಕಚೇರಿಯಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಮಂಡ್ಯ, ಮೈಸೂರು, ಕೆ.ಆರ್.ನಗರ, ಚಾಮರಾಜನಗರ, ಚನ್ನಪಟ್ಟಣ, ಕೆಂಗೇರಿ ಮತ್ತು ಬಿಡದಿಯಲ್ಲಿ ಕೆಲಸ ಮಾಡಬಲ್ಲ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಮೇಲ್ಪಟ್ಟ 18 ರಿಂದ 32 ವರ್ಷದೊಳಗಿನ ದ್ವಿಚಕ್ರ ವಾಹನ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಬೆಳಗ್ಗೆ 10ಗಂಟೆಗೆ ಸ್ವವಿವರೊಂದಿಗೆ ಸಂದರ್ಶನದಲ್ಲಿ ಹಾಜರಾಗಬಹುದು. ಮಾಸಿಕ 16,500 ರೂನಿಂದ 25 ಸಾವಿರ ರೂವರೆಗೆ ವೇತನವಿರಲಿದೆ. ಇದಲ್ಲದೆ ಪ್ರಯಾಣ ಭತ್ಯೆ, ಪಿ.ಎಫ್, ವಿಮೆ ಹಾಗೂ ವಸತಿ ಉಚಿತವಾಗಿರಲಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net