

ಧಾರವಾಡ: ಜಿಲ್ಲೆಯ 1,06,707 ರೈತರ 1,23,572 ಹೆಕ್ಟೇರ್‌ಗೆ 108.12 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ವಿತರಣೆಗೆ ಅನುಮೋದನೆ ನೀಡಲಾಗಿದೆ. ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ. ಸುಮಾರು 6,083 ರೈತರ ಖಾತೆಗಳಿಗೆ ವಿವಿಧ ತಾಂತ್ರಿಕ ಕಾರಣಗಳಿಂದ ಪರಿಹಾರದ ಮೊತ್ತ ಜಮೆಯಾಗಿಲ್ಲ ಎಂದು ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಡಿಆರ್‌ಎಫ್- ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಅನ್ವಯ ಬಿತ್ತನೆಯಾದ ಶೇ. 33ರಷ್ಟು ಬೆಳೆ ಹಾನಿಯಾದ ರೈತರಿಗೆ ಗರಿಷ್ಠ 2 ಹೆಕ್ಟೇರ್‌ಗೆ ಪರಿಹಾರ ನಿಗದಿಪಡಿಸಲಾಗಿದೆ. 1 ಹೆಕ್ಟೇರ್ ಮಳೆಯಾಶ್ರಿತ ಬೆಳೆಗೆ 8,500 ರೂಪಾಯಿ, 1 ಹೆಕ್ಟೇರ್ ನೀರಾವರಿ ಬೆಳೆಗೆ 17,000 ರೂಪಾಯಿ ಪರಿಹಾರ ವಿತರಣೆಗೆ ಅವಕಾಶವಿದೆ ಎಂದರು.
ಆಧಾರ್ ಕಾರ್ಡ್ ಮತ್ತು ಫ್ರೂಟ್ ಐಡಿಯಲ್ಲಿ ಹೆಸರು ವ್ಯತ್ಯಾಸ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಮ್ಯಾಪ್ ಆಗದಿರುವುದು, ಎನ್‌ಪಿಸಿಐ ಜೋಡಣೆಯಾಗದಿರುವುದು, ಆಧಾರ್ ನಿಷ್ಕಿçಯ, ಬ್ಯಾಂಕ್ ಖಾತೆ ಬ್ಲಾಕ್ ಅಥವಾ ಮುಚ್ಚಿದ ಪ್ರಕರಣ, ಐಎಫ್‌ಎಸ್‌ಸಿ ಕೋಡ್ ತಪ್ಪಾಗಿ ನಮೂದಿಸಿರುವ ಪ್ರಕರಣಗಳಿಗೆ ಪರಿಹಾರದ ಮೊತ್ತ ಜಮೆಯಾಗಿಲ್ಲ ಎಂದರು.
ಇAಥ 6,083 ರೈತರನ್ನು ಗ್ರಾಮ ಆಡಳಿತಾಽಕಾರಿಗಳು ಸಂಪರ್ಕಿಸಿ ತಿಳಿವಳಿಕೆ ನೀಡಿ 4,918 ರೈತರ ತಾಂತ್ರಿಕ ದೋಷವನ್ನು ಸರಿಪಡಿಸಿದ್ದಾರೆ. 660 ರೈತರು ಮರಣ ಹೊಂದಿರುತ್ತಾರೆ. 505 ರೈತರು ಪರಸ್ಥಳದಲ್ಲಿ ವಾಸವಿರುತ್ತಾರೆ ಎಂದರು.
ತಾAತ್ರಿಕ ದೋಷದಿಂದ ಪರಿಹಾರ ಜಮೆಯಾಗದಿರುವ ರೈತರು ಕೂಡಲೇ ತಹಸೀಲ್ದಾರ್ ಕಚೇರಿಯ ಸಹಾಯವಾಣಿಯನ್ನು ಸಂಪರ್ಕಿಸಬೇಕು. ಅಥವಾ ಜಿಲ್ಲಾಽಕಾರಿ, ಉಪ ವಿಭಾಗಾಽಕಾರಿ, ಕೃಷಿ ಇಲಾಖೆ ಜಂಟಿ- ಉಪ ನಿರ್ದೇಶಕರ ಕಚೇರಿ, ಆಯಾ ತಹಸೀಲ್ದಾರ್ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಽಕಾರಿ ತಿಳಿಸಿದರು.
ಬಿತ್ತನೆ ಬೀಜ, ಗೊಬ್ಬರ ದಾಸ್ತಾನು
ಜಿಲ್ಲೆಯಲ್ಲಿ ಮೇ 21ರವರೆಗೆ 112 ಮಿ.ಮೀ. ಮಳೆಯಾಗಿದೆ. ರೈತರು ಬಿತ್ತನೆಪೂರ್ವ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಪ್ರಸಕ್ತ ಮುಂಗಾರಿನಲ್ಲಿ 2,70,840 ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಇದೆ. ಸಹಾಯಧನದಲ್ಲಿ 20,681 ಕ್ವಿಂಟಲ್ ವಿವಿಧ ಬೆಳೆಗಳ ಬೀಜ ವಿತರಣೆ ಬೇಡಿಕೆ ಇದೆ. ಸೋಯಾಬಿನ್, ಮೆಕ್ಕೆಜೋಳ, ಶೇಂಗಾ, ಹೆಸರು, ಉದ್ದು, ಭತ್ತ ಸೇರಿ 23,779 ಕ್ವಿಂಟಲ್ ಬೀಜ ಲಭ್ಯ ಇದೆ. 14 ರೈತ ಸಂಪರ್ಕ ಕೇಂದ್ರಗಳು, 17 ಹೆಚ್ಚುವರಿ ಕೇಂದ್ರ ಸೇರಿ 31 ವಿತರಣಾ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 56,243 ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಇದ್ದು, ರೈತರ ಬೇಡಿಕೆಗೆ ಅನುಗುಣವಾಗಿ ದಾಸ್ತಾನಿದೆ. ನಕಲಿ ಅಥವಾ ಕಳಪೆ ಕೃಷಿ ಪರಿಕರ, ನಿಯಂತ್ರಣಕ್ಕೆ ಕೃಷಿ ಜಾಗೃತ ಕೋಶದ ಅಽಕಾರಿಗಳು ನಿಯಮಿತವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ ಎಂ. ಮಾಹಿತಿ ನೀಡಿದರು.