ಡೈರಕ್ಟ್ ಆಕ್ಷನ್ ನಾಟಕ ಪ್ರದರ್ಶನ ಇಂದು

Drama-games
Published on

ಮದ್ದೂರು: ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ರೈತ ಸಂಘಟನೆ ಮೂಲಕ ನಡೆಸಿದ ರೈತ ಚಳವಳಿಯ ಘಟನಾವಳಿ ಆಧಾರಿತ ನಾಟಕ ಡೈರಕ್ಟ್ ಆಕ್ಷನ್ ಫೆ.11ರಂದು ಸಂಜೆ 6.30 ಕ್ಕೆ ಮದ್ದೂರಿನ ಪದವಿ ಪೂರ್ವ ಸರ್ಕಾರಿ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಪ್ರೊ.ಎಂ.ಡಿ.ಎನ್ ರೈತ ಚೈತನ್ಯ ಕೇಂದ್ರದ ಅಧ್ಯಕ್ಷ ನ.ಲಿ.ಕೃಷ್ಣ ತಿಳಿಸಿದ್ದಾರೆ.

ನಟರಾಜ್ ಹುಳಿಯಾರ್ ರಚನೆ ಮಾಡಿದ್ದು, ಕಬಡ್ಡಿ ನರೇಂದ್ರ ಬಾಬು ನಿರ್ದೆಶಿಸಿದ್ದಾರೆ. ಚಲನಚಿತ್ರ ನಟ ಸಂಪತ್ ಮೈತ್ರೇಯಾ ಪ್ರೊ.ಎಂಡಿಎನ್ ಪಾತ್ರ ನಿರ್ವಹಿಸುತ್ತಿದ್ದು, ಬೆಂಗಳೂರಿನ ನಗ್ನ ಥಿಯೇಟರ್ ತಂಡದ ಕಲಾವಿದರ ತಂಡ ನಾಟಕ ಪ್ರಸ್ತುತ ಪಡಿಸಲಿದ್ದಾರೆ ಪ್ರೊ.ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಮತ್ತು ಪುತ್ರ ಪಚ್ಚೆ ನಂಜುಂಡಸ್ವಾಮಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net