ಸೌಂದರ್ಯ ವರ್ಧನೆ, ರಕ್ಷಣೆಗೆ ಪೂರಕ ಚಿಕಿತ್ಸೆ; ಮಂಗಳೂರಿನಲ್ಲಿ ‘ದಿರಾ’ ಅಸ್ತೆಟಿಕ್ಸ್ ಕ್ಲಿನಿಕ್ ಉದ್ಘಾಟಿಸಿ ಎ.ಜೆ. ಶೆಟ್ಟಿ ಭರವಸೆ

DIRA
ಮಂಗಳೂರು ಕದ್ರಿ- ಕರಂಗಲ್ಪಾಡಿ ರಸ್ತೆಯ ಪಿಂಟೋ ಆರ್ಕೆಡ್‌ನ ಎರಡನೇ ಮಹಡಿಯಲ್ಲಿ ಸುಸಜ್ಜಿತ ‘ದಿರಾ’ ಅಸ್ತೆಟಿಕ್ಸ್ ಕ್ಲಿನಿಕ್ ಅನ್ನು ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರು ಗುರುವಾರ ಉದ್ಘಾಟಿಸಿದರು. ಡಾ.ಎ.ಜೆ.ಶೆಟ್ಟಿ ಅವರ ಪತ್ನಿ ಶಾರದಾ ಶೆಟ್ಟಿ, ಲಕ್ಷ್ಮಿ ಮೆಮೋರಿಯಲ್ ಟ್ರಸ್ಟ್ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ನಿರ್ದೇಶಕಿ ಅಶ್ರಿತಾ ಶೆಟ್ಟಿ, ವೈದ್ಯಕೀಯ ಆಡಳಿತ ನಿರ್ದೇಶಕಿ ಡಾ.ಅಮಿತಾ ಮಾರ್ಲ, ಡಾ.ರಮ್ಯ ಶ್ರುತಿ, ಡಾ.ಆದಿತ್ಯ ಶೆಟ್ಟಿ ಉಪಸ್ಥಿತರಿದ್ದರು.
Published on

ಮಂಗಳೂರು: ನಗರದ ಪ್ರತಿಷ್ಠಿತ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಚರ್ಮದ ಕಾಂತಿಯನ್ನು ಹೆಚ್ಚಿಸುವ ಮತ್ತು ನ್ಯೂನತೆಗಳನ್ನು ಸರಿಪಡಿಸುವ ಕ್ಷೇತ್ರದಲ್ಲಿ ವಿಶೇಷ ಸೇವೆ ನೀಡುವ ಉದ್ದೇಶದಿಂದ ಮಂಗಳೂರು ಕದ್ರಿ- ಕರಂಗಲ್ಪಾಡಿ ರಸ್ತೆಯ ಪಿಂಟೋ ಆರ್ಕೆಡ್‌ನ ಎರಡನೇ ಮಹಡಿಯಲ್ಲಿ ಸುಸಜ್ಜಿತ ‘ದಿರಾ’ ಅಸ್ತೆಟಿಕ್ಸ್ ಕ್ಲಿನಿಕ್ ಆರಂಭಿಸಿದೆ.

ನೂತನ ಕ್ಲಿನಿಕ್ ಅನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರು, ಸೌಂದರ್ಯ ವರ್ಧನೆ ಹಾಗೂ ಸಂರಕ್ಷಣೆಯಲ್ಲಿ ನೂತನ ಕ್ಲಿನಿಕ್ ಜನರ ಅಪೇಕ್ಷೆಯನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದಿರಾ’ ಅಸ್ತೆಟಿಕ್ಸ್ ಕ್ಲಿನಿಕ್ ಸೌಂದರ್ಯದ ವಿಚಾರಕ್ಕೆ ಸಂಬಂಧಪಟ್ಟಂತೆ ಔಷಧ, ಚಿಕಿತ್ಸೆ ನೀಡುವ ಸಮಗ್ರ ಘಟಕವಾಗಿದೆ. ಡರ್ಮಟಾಲಜಿಸ್ಟ್ ಡಾ.ರಮ್ಯಾ ಶ್ರುತಿ ಅವರ ಮೇಲ್ವಿಚಾರಣೆಯಲ್ಲಿ ಈ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಪ್ಲಾಸ್ಟಿಕ್ ಸರ್ಜನ್ ಡಾ.ದಿನೇಶ್ ಕದಮ್ ನೇತೃತ್ವದ ಸಂಪೂರ್ಣ ತಂಡ ಕಾರ್ಯನಿರ್ವಹಿಸಲಿದೆ ಎಂದು ಅವರು ವಿವರಿಸಿದರು.

ಎ.ಜೆ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಅವರು ಮಾತನಾಡಿ, ಜನರು ತಮ್ಮ ಸೌಂದರ್ಯ ಹಾಗೂ ಆರೋಗ್ಯದ ವಿಚಾರದಲ್ಲಿ ಸಹಜವಾಗಿಯೇ ಹೆಚ್ಚಿನ ಕಾಳಜಿ ವಹಿಸುತ್ತಾರೆ. ನೂತನ ಕ್ಲಿನಿಕ್‌ನಲ್ಲಿ ಚರ್ಮದ ಚಿಕಿತ್ಸೆಗೆ ಸಂಬಂಧಿಸಿದ ಲೇಸರ್ ಚಿಕಿತ್ಸೆ, ವಿವಿಧ ಥೆರಪಿಗಳು, ಪ್ಲಾಸ್ಟಿಕ್ ಸರ್ಜರಿ ಸಹಿತ ಎಲ್ಲ ರೀತಿಯ ಆಧುನಿಕ ಚಿಕಿತ್ಸೆ ಸೌಲಭ್ಯಗಳು ಇರುವುದು ಎಂದು ಹೇಳಿದರು.

ಕ್ಲಿನಿಕ್‌ನಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಬಳಕೆ ಮಾಡುತ್ತೇವೆ. ಮುಖ್ಯವಾಗಿ ಸುಧಾರಿತ ಚರ್ಮದ ಬಿಗಿಗೊಳಿಸುವಿಕೆ ಮತ್ತು ಬಾಹ್ಯರೇಖೆಗಾಗಿ ಮಾರ್ಫಿಯಸ್ 8, ಚರ್ಮದಲ್ಲಿ ಕಾಂತಿ, ಗಾಯದ ಚಿಕಿತ್ಸೆಗಾಗಿ ಮೈಕ್ರೋ-ನೀಡಿಂಗ್ ರೇಡಿಯೊಫ್ರೀಕ್ವೆನ್ಸಿ, ಲೇಸರ್ ಕೂದಲು ತೆಗೆಯುವಿಕೆಗಾಗಿ ಡಯೋಲೇಜ್ ಎಕ್ಸ್ ಎಲ್, ವಿವಿಧ ಚರ್ಮದ ಚಿಕಿತ್ಸೆಗಳು ಮತ್ತು ಕಾಂತಿನೀಡಲು ಕ್ಯೂ-ಸ್ವಿಚ್ ಮತ್ತು ಸಿಒ2 ಲೇಸರ್‌ಗಳು ಯಂತ್ರಗಳನ್ನು ಚಿಕಿತ್ಸೆ ವೇಳೆ ಬಳಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಎ.ಸದಾನಂದ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಶುಭ ಹಾರೈಸಿದರು.

ಡಾ.ಎ.ಜೆ.ಶೆಟ್ಟಿ ಅವರ ಪತ್ನಿ ಶಾರದಾ ಶೆಟ್ಟಿ, ಲಕ್ಷ್ಮಿ ಮೆಮೋರಿಯಲ್ ಟ್ರಸ್ಟ್ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ನಿರ್ದೇಶಕಿ ಅಶ್ರಿತಾ ಶೆಟ್ಟಿ, ವೈದ್ಯಕೀಯ ಆಡಳಿತ ನಿರ್ದೇಶಕಿ ಡಾ.ಅಮಿತಾ ಮಾರ್ಲ, ಡಾ.ರಮ್ಯ ಶ್ರುತಿ, ಡಾ.ಆದಿತ್ಯ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net