ದೀಪೋತ್ಸವ ಕಾರ್ಯಕ್ರಮ ಇಂದು

DECEMBER-2024-09-04
ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದ ಶ್ರೀ ಕೊಳ್ಳಿ ಕೊಡುಗೆ ಆದಿಶಕ್ತ ಬಸವಪ್ಪನವರ ಅಲಂಕೃತ ಚಿತ್ರ.
Published on

ಮದ್ದೂರು: ತಾಲೂಕಿನ ದೇಶಹಳ್ಳಿ ಗ್ರಾಮದ ಶ್ರೀ ಕೊಳ್ಳಿ ಕೊಡುಗೆ ಆದಿಶಕ್ತ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಕಾರ್ತಿಕ ಮಾಸದ ದೀಪೋತ್ಸವವನ್ನು ಆಯೋಜಿಸಿರುವುದಾಗಿ ದೇವಾಲಯದ ಪ್ರಧಾನ ಅರ್ಚಕ ಉಮೇಶ್ ತಿಳಿಸಿದ್ದಾರೆ.

ಡಿ.10ರ ಮಂಗಳವಾರ ಬೆಳಗ್ಗೆ ದೇವಾಲಯದ ಆವರಣದಲ್ಲಿ ಹೋಮ, ಹವನ, ಅಭಿಷೇಕ, ಅಲಂಕಾರ, ತೀರ್ಥಪ್ರಸಾದ ಇನ್ನಿತರ ಪೂಜಾ ವಿಧಿ-ವಿಧಾನಗಳು ನೆರವೇರಲಿದ್ದು ಬಳಿಕ 10 ಗಂಟೆಗೆ ಹೂ ಹೊಂಬಾಳೆ ಸಮೇತ ಆದಿಶಕ್ತಿ ಅಮ್ಮನವರ ಗಿಂಡಿ ಉತ್ಸವ ಜರುಗಲಿದೆ.

ಮಂಗಳವಾರ ಸಂಜೆ 6 ಗಂಟೆಗೆ ದೀಪಾಲಂಕಾರ ಮತ್ತು ಆದಿಶಕ್ತಿ ಬಸವಪ್ಪನವರ ಉತ್ಸವಮೂರ್ತಿ ಮೆರವಣಿಗೆ, ಮಹಾಮಂಗಳಾರತಿ ಕಾರ್ಯಕ್ರಮ ಜರುಗಲಿದೆ.

ರಾತ್ರಿ 7 ಗಂಟೆಗೆ ದೇವಾಲಯದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net