ಕಾರ್ಜುವಳ್ಳಿ ಹಿರೇಮಠದಲ್ಲಿ ದೀಪೋತ್ಸವ

IMG-20231203-WA0243
ಕಾರ್ತಿಕ ಮಹೋತ್ಸವ ಪ್ರಯುಕ್ತ ಆಲೂರು ತಾಲೂಕಿನ ಕಾರ್ಜುವಳ್ಳಿ ಗ್ರಾಮದ ಶ್ರೀ ಜಗದ್ಗುರು ರಂಭಾಪುರಿ ಶಾಖಾ ಮಠ ಕಾರ್ಜುವಳ್ಳಿ ಹಿರೇಮಠದಲ್ಲಿ ಭಾನುವಾರ ದೀಪೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ಆಲೂರು: ತಾಲೂಕಿನ ಕಾರ್ಜುವಳ್ಳಿ ಗ್ರಾಮದ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಶಾಖಾ ಮಠ ಕಾರ್ಜುವಳ್ಳಿ ಹಿರೇಮಠದಲ್ಲಿ ಸೋಮವಾರ ಕಾರ್ತಿಕ ಮಹೋತ್ಸವ ಪ್ರಯುಕ್ತ ದೀಪೋತ್ಸವ ಅದ್ದೂರಿಯಾಗಿ ಜರುಗಿತು.


ಮಠದ ಆವರಣದ ಎಲ್ಲ ದೇವರಿಗೆ ರುದ್ರಾಭಿಷೇಕ, ದೇವರ ವಿಗ್ರಹಕ್ಕೆ ಅಲಂಕಾರ, ಮಠವನ್ನು ಹೂ ಹಾಗೂ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ ದೀಪಾಲಂಕಾರ, ಕಾರ್ತಿಕ ಪೂಜೆ, ವರ್ಣರಂಜಿತ ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯಿತು. ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.


ಪೂಜಾ ಕೈಂಕರ್ಯಗಳನ್ನು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net