ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ದೀಪೋತ್ಸವ

12Kush01 (1)
ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ದೀಪೋತ್ಸವ ಜರುಗಿತು.
Published on

ಕುಶಾಲನಗರ: ಕಾರ್ತಿಕ ಮಾಸದ ಕೊನೆಯ ಸೋಮವಾರ ಅಂಗವಾಗಿ ಇಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಯುವಜನ ಸಂಘದ ಸಹಯೋಗದಲ್ಲಿ ದೀಪೋತ್ಸವ ನಡೆಯಿತು.

ಮುಂಜಾನೆಯೇ ದೇವರಿಗೆ ಅಭಿಷೇಕ ಮತ್ತು ಪೂಜೆಯನ್ನು ಅರ್ಚಕ ಗಿರೀಶ್‌ಭಟ್ ಮತ್ತು ಪ್ರಮೋದ್ ಭಟ್ ನೆರವೇರಿಸಿದರು. ಬಳಿಕ ಸಂಜೆ ದೇವಸ್ಥಾನದಲ್ಲಿ ದೀಪೋತ್ಸವಕ್ಕೆ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಚಾಲನೆ ನೀಡಿದರು. ನಂತರ ಆರ್ಯವೈಶ್ಯ ಸಮುದಾಯದವರು ಒಂದೊಂದು ದೀಪ ಹಚ್ಚುವ ಮೂಲಕ ನೂರಾರು ದೀಪಗಳನ್ನು ಬೆಳಗಿಸಿದರು.

ಆರ್ಯವೈಶ್ಯ ಮಹಾಸಭಾದ ಕೊಡಗು ಜಿಲ್ಲಾ ನಿರ್ದೇಶಕ ಬಿ.ಆರ್.ನಾಗೇಂದ್ರ ಪ್ರಸಾದ್, ಜಿಲ್ಲಾಧ್ಯಕ್ಷ ಬಿ.ಎಲ್.ಸತ್ಯನಾರಾಯಣ, ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಪ್ರವೀಣ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ಯುವತಿಯರ ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್, ಯುವಜನ ಸಂಘದ ಅಂಜನ್, ಸಂಕೀರ್ತ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net