ಬಜೆ ದೇಲಂತೊಟ್ಟು ದೇಗುಲದಲ್ಲಿ ದೀಪೋತ್ಸವ

New Project (16)
Published on

ಉಪ್ಪಳ: ಬಂದ್ಯೋಡು ಸಮೀಪದ ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ನ.21ರ ತನಕ ನಡೆಯಲಿರುವ ವಿಶೇಷ ಕಾರ್ತಿಕ ದೀಪೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಧಾರ್ಮಿಕ ಸಭೆ ಜರುಗಿತು. ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮತ್ತು ಕ್ಷೇತ್ರದ ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು.

ಕ್ಷೇತ್ರದ ಪುರೋಹಿತರಾದ ಗಣೇಶ ನಾವಡ, ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಹೆಗ್ಡೆ ಕೋಡಿಬೈಲ್, ಸಿ.ಎಸ್ ಕೃಷ್ಣಪ್ಪ ಐಲ, ಈಶ್ವರ ಐಲ, ದಾಮೋದರ ಮಯ್ಯ, ಚಿದಾನಂದ ಮಯ್ಯ, ಶಾಲಿನಿ ಉದಯ್ ಕುಮಾರ್, ಲಲಿತಾ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು. ಹರಿನಾರಾಯಣ ಮಯ್ಯ ಸ್ವಾಗತಿಸಿದರು. ರುಚಿತ್ ಪೂಜಾರಿ ಕಂಗ್ವೆ ವಂದಿಸಿದರು. ಬಬಿತಾ ಕೃಷ್ಣ ಮಯ್ಯ ನಿರೂಪಿಸಿದರು. ಸಂಜೆ ತಾಡ ಶ್ರೀ ಮಹಾವಿಷ್ಣು ಮೂರ್ತಿ ಭಜನಾ ಸಂಘದಿಂದ ಭಜನಾ ಸಂಕೀರ್ತನೆ, ವಿಷ್ಣು ಸಹಸ್ರನಾಮ ಸ್ತೋತ್ರಪಠಣ, ದೇವರಿಗೆ ದೀಪೋತ್ಸವ ಹಾಗೂ ಅನ್ನಸಂತರ್ಪಣೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net