ರಾಮ ಮಂದಿರದ ಮಾದರಿ ಪ್ರದರ್ಶನ,  ಎಪಿಎಂಸಿ ಹೊಸಮನಿ ಟ್ರೇಡರ್ಸನಲ್ಲಿ ವ್ಯವಸ್ಥೆ

IMG_20251022_171158_200.jpg
Published on

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾದ ನಂತರ ಕೊಟ್ಯಂತರ ಭಕ್ತರು ವೀಕ್ಷಣೆ ಮಾಡಿದ್ದಾರೆ. ಮಂದಿರ ನಿರ್ಮಾಣ ನಂತರ ಕರ್ನಾಟಕ ರಾಜ್ಯಾದ್ಯಂತ ಮಾದರಿ ದೇವಸ್ಥಾನವನ್ನು ಜನರಿಗೆ ತೋರಿಸುವ ಸೇವಾ ಕಾರ್ಯದಲ್ಲಿ ತುಮಕೂರಿನ ರಾಮ ಭಕ್ತರೊಬ್ಬರು ನಿರತರಾಗಿದ್ದಾರೆ.

ದೀಪಾವಳಿ ಅಂಗವಾಗಿ ಇಲ್ಲಿಯ ಎಪಿಎಂಸಿ ಪ್ರಾಂಗಣದ ಹೊಸಮನಿ ಟ್ರೇಡರ್ಸ್ ಆವರಣದಲ್ಲಿ ಬಲಿಪಾಡ್ಯದಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ವಿನಯರಾಮ ಬಿದರೆ ಅವರು ಮಾದರಿ ರಾಮ ಮಂದಿರ ನಿರ್ಮಿಸಿದ್ದಾರೆ.

ಹಾಗೆಯೇ ನೋಡಲು ಬರುವ ಭಕ್ತರಿಗೆ ಸಂಪೂರ್ಣ ರಾಮಾಯಣದ ಮಾಹಿತಿಯನ್ನು ಅವರು ಒದಗಿಸುತ್ತಿದ್ದಾರೆ.

ಮಹಾಸರಸ್ವತಿ ಹಾಗೂ ಮಹಾಲಕ್ಷ್ಮಿ ಪೂಜೆ ನಿಮಿತ್ತ ಸುದರ್ಶನ ಚಕ್ರ ಸಮೇತ ಶ್ರೀಕೃಷ್ಣನ ಬೃಹತ್ ರೂಪಕವನ್ನು ಸಹ ಇಲ್ಲಿ ನಿರ್ಮಿಸಲಾಗಿದೆ.
ಅಯೋಧ್ಯೆಯಲ್ಲಿ ಬಾಲರಾಮ ಮಂದಿರ ಉದ್ಘಾಟನೆಯಾದ ಮೇಲೆ ಅದೇ ಮಾದರಿಯ ಮಂದಿರವನ್ನು ಎಲ್ಲ ಭಕ್ತರಿಗೆ ದರ್ಶನ ಮಾಡಿಸಲು ವಿನಯರಾಮ್ ಅವರು ಈ ಸೇವೆ ಕೈಗೊಂಡಿದ್ದಾರೆ.

ಇದಕ್ಕಾಗಿ ಶಿಕ್ಷಕ ವೃತ್ತಿ ತೊರೆದ ಇವರು ಕರ್ನಾಟಕದಲ್ಲಿ ಇದೀಗ 92 ಪ್ರದರ್ಶನ ನೀಡಿದ್ದು, ಇದು 93ನೇ ಪ್ರದರ್ಶನವಾಗಿದೆ. ಈಗಾಗಲೇ 17 ಜಿಲ್ಲೆಗಳಲ್ಲಿ ಮಾದರಿ ಮಂದಿರ ಪ್ರದರ್ಶನ ಕಂಡಿದೆ. ಒಟ್ಟಾರೆ, ಶ್ರೀರಾಮನ ಇತಿಹಾಸ ಎಲ್ಲೆಡೆ ಪಸರಿಸುವುದು ತಮ್ಮಉದ್ದೇಶ. ರಾಮ ಮಂದಿರದ ಪ್ರತಿರೂಪದಂತೆ ಇದನ್ನು ನಿರ್ಮಿಸಲಾಗಿದೆ. ಸಂಪೂರ್ಣ ರಾಮಾಯಣದ ಚಿತ್ರಣವನ್ನು ಮಂದಿರದಲ್ಲಿ ತೋರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net