ದೀಪಾವಳಿ ಪೂಜೆ ಮುಹೂರ್ತಗಳು

Published on

ಹುಬ್ಬಳ್ಳಿ: ಪ್ರಸಕ್ತ ವರ್ಷದ ದೀಪಾವಳಿ ಹಾಗೂ ಪಾಡ್ಯದ ಶುಭ ಹಾಗೂ ಪೂಜೆ ಮುಹೂರ್ತಗಳ ಮಾಹಿತಿಯನ್ನು ವೇ. ರಾಜಶೇಖರ ಶಾಸ್ತ್ರೀಗಳು ಸಾಲಿಮಠ ಅವರು ನೀಡಿದ್ದಾರೆ.

ಅ. 30ರಂದು ಬುಧವಾರ ಧನ ತ್ರಯೋದಶಿ, ನೀರು ತುಂಬುವ ಹಬ್ಬ. ಗಾದಿ ಪೂಜೆ, ಖಾತೆ ಕೀದಿರ್ ತರುವುದು. ಬೆಳಗ್ಗೆ 10.15ರಿಂದ 11.40ರ ವರೆಗೆ, ಸಂಜೆ 4.15 ರಾತ್ರಿ 9.30ರ ವರೆಗೆ ಇರಲಿದೆ.

ಅ. 31ರಂದು ಗುರುವಾರ ನರಕ ಚತುರ್ದಶಿ ಬೆಳಗ್ಗೆ ಅಭ್ಯಂಗ ಸ್ನಾನ ಮಾಡಲು ಉತ್ತಮ. ಮಧ್ಯಾಹ್ನ 3.54ಕ್ಕೆ ಅಮಾವಾಸ್ಯೆ ಪ್ರಾರಂಭ.

ನವೆಂಬರ್ 1ರಂದು ಶುಕ್ರವಾರ ದೀಪಾವಳಿ ಅಮಾವಾಸ್ಯೆ. ಬೆಳಗ್ಗೆ 9.12ರಿಂದ 10.30 ಅಮೃತ, ಮಧ್ಯಾಹ್ನ 2ರಿಂದ 5.12 ಅಮೃತ, ಸಂಜೆ 5.30ರಿಂದ 6.15 ಉತ್ತಮ, 6.17ಕ್ಕೆ ಅಮಾವಾಸ್ಯೆ ಮುಕ್ತಾಯ.

ನವೆಂಬರ್ 2ರಂದು ಶನಿವಾರ ದೀಪಾವಳಿ ಪಾಡ್ಯ. ಬೆಳಗ್ಗೆ 5.21ರಿಂದ 6.5ರ ವರೆಗೆ ಬ್ರಾಹ್ಮೀ ಮೂಹೂರ್ತ. ಬೆಳಗ್ಗೆ 7.25ರಿಂದ 9.10 ಅತ್ಯುತ್ತಮ. ಬೆಳಗ್ಗೆ 10.45ರಿಂದ 11.20 ಉತ್ತಮ, ಸಂಜೆ 6.25 ರಿಂದ 8.10 ಉತ್ತಮ. ದೀಪಾವಳಿ ಪಾಡ್ಯದಿಂದ ನ. 15ರ ವರೆಗೆ ರಾಜಯೋಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net