ಕೊಳ್ಳೇಗಾಲ ದೇವಾಂಗ ಪೇಟೆಯಲ್ಲಿ ಭೋಜನ ಕೂಟ

1-KGL-4
ಕೊಳ್ಳೇಗಾಲದ ನಡುಕಲ ಬೀದಿಯ ರಾಮ ಮಂದಿರ ಮುಂಭಾಗ ಮಂಗಳವಾರ ಶ್ರೀರಾಮಲಿಂಗ ಶ್ರೀಚೌಡೇಶ್ವರಿ ಅಮ್ಮನವರ ಕಲ್ಯಾಣೋತ್ಸವ ಅಂಗವಾಗಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಸಮಾಜದ ಜನರು ಭೋಜನ ಸವಿದರು.
Published on

ಕೊಳ್ಳೇಗಾಲ: ಶ್ರೀರಾಮಲಿಂಗ ಶ್ರೀಚೌಡೇಶ್ವರಿ ಅಮ್ಮನವರ ಕಲ್ಯಾಣೋತ್ಸವ ಅಂಗವಾಗಿ ಪಟ್ಟಣದಲ್ಲಿ ಮಂಗಳವಾರ ದೇವಾಂಗ ಪೇಟೆಯ 15 ಬೀದಿಗಳಲ್ಲಿ ಭೋಜನ ಕೂಟ ಆಯೋಜಿಸಲಾಗಿತ್ತು.

ಕಲ್ಯಾಣೋತ್ಸವ ಪ್ರಯುಕ್ತ ಮಾ.23ರಿಂದ 12 ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು. ಸೋಮವಾರ ಬ್ರಹ್ಮ ರಥೋತ್ಸವ ಜರುಗಿತ್ತು. ಮಂಗಳವಾರ ಕಾವೇರಿ ನದಿ ತೀರದಲ್ಲಿ ದೇವರ ಹೆಸರಲ್ಲಿ ತೀರ್ಥ ಸ್ನಾನ ಮಾಡಿ ಪ್ರಸಾದ ಸ್ವೀಕರಿಸಿ ದೇವಾಂಗ ಪೇಟೆಯ ಎಲ್ಲ ಬೀದಿಗಳಲ್ಲೂ ವಿತರಣೆ ಮಾಡಲಾಯಿತು. ನಂತರ ಪ್ರತಿ ಬೀದಿಗಳಲ್ಲಿ ಭೋಜನ ಕೂಟ ಏರ್ಪಡಿಸಲಾಗಿತ್ತು. ಸಮಾಜದ ಜನರು ಸಾಮೂಹಿಕವಾಗಿ ಕುಳಿತು ಪ್ರಸಾದ ಸವಿದರು.

ನಡುಕಲ ಬೀದಿಯ ಕಾರ್ಯಕರ್ತ ಕೆ.ವಿ.ಸೋಮಶೇಖರ್ ಮಾತನಾಡಿ, ಹಲವು ವರ್ಷಗಳಿಂದ ಯುಗಾದಿ ಹಬ್ಬವನ್ನು ಶ್ರೀರಾಮಲಿಂಗ ಚೌಡೇಶ್ವರಿ ಸನ್ನಿದ್ಧಿಯಲ್ಲಿ ವಿವಿಧ ಪೂಜೆ, ಪುನಸ್ಕಾರದೊಂದಿಗೆ ವಿಶೇಷವಾಗಿ ಆಚರಣೆ ಮಾಡಲಾಯಿತು. ಕುಲ ಗುರುಗಳಾದ ಪುಲಾ ಕುಮಾರಸ್ವಾಮಿ ನೇತೃತ್ವದಲ್ಲಿ ಸಂಪ್ರದಾಯದಂತೆ ಎಲ್ಲ ಪೂಜೆಗಳನ್ನು ನೆರವೇರಸಲಾಗಿದೆ ಎಂದು ತಿಳಿಸಿದರು.

ನಡುಕಲ ಬೀದಿಯ ಕಾರ್ಯಕರ್ತರಾದ ಶ್ರೀನಿವಾಸ್, ರಮೇಶ್ ಮೂರಾರಿ, ಗೋವಿಂದಪ್ಪ, ವಸಂತ್ ಕುಮಾರ್, ಲಕ್ಷ್ಮೀಪತಿ, ಬಾಲಕೃಷ್ಣಯ್ಯ, ಆಂಧ್ರ ದೇವಾಂಗ ಸಭಾ ಪದಾಧಿಕಾರಿಗಳು, ದೇವಾಂಗ ಸಮುದಾಯ ಮುಖಂಡರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net