

ಕಲಬುರಗಿ: ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿಷಯದಲ್ಲಿ ಗೊಂದಲ ಮೂಡಿಸದೆ ಜ್ಞಾನಿಯಾಗಿರುವ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ನೇಮಿಸುವಂತೆ ಶ್ರೀಶೈಲ ಸಾರಂಗಧರ ಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಸಲಹೆ ನೀಡಿದ್ದಾರೆ.
ಅಭಿವೃದ್ಧಿಪರ ಮತ್ತು ಕ್ರಾಂತಿಕಾರಿ ಆಗಿದ್ದಾರೆ. ಅವರನ್ನು ಉತ್ತರಾಧಿಕಾರಿಯಾಗಿ ಮಾಡುವುದರಿಂದ ಮಠ ಇನ್ನಷ್ಟು ಅಭಿವೃದ್ಧಿ ಆಗುವುದರಲ್ಲಿ ಸಂಶಯ ಇಲ್ಲ. ಹೀಗಾಗಿ ಅವರನ್ನೇ ನೇಮಿಸುವ ಮೂಲಕ ವಿವಾದ ಕೊನೆಗಾಣಿಸಬೇಕೆಂದು ಮನವಿ ಮಾಡಿದ್ದಾರೆ.
ಸುತ್ತೂರು, ಗದಗ, ಸಿರಿಗೆರೆ, ಚಿತ್ರದುರ್ಗ, ಮೂರುಸಾವಿರ ಮಠದ ಸ್ವಾಮಿಗಳು, ಹುಬ್ಬಳ್ಳಿ- ಧಾರವಾಡ ಜನತೆ ಹಾಗೂ ಟ್ರಸ್ಟಿಗಳು ಸೇರಿ ಈ ಸಮಸ್ಯೆ ಪರಿಹರಿಸಬೇಕು. ಚಿಕ್ಕ-ಪುಟ್ಟ ವಿಷಯಗಳಿಂದ ಮಠಗಳನ್ನು ವಿವಾದದ ಕೇಂದ್ರವನ್ನಾಗಿಸುವುದು ಬೇಡ ಎಂದು ಸ್ವಾಮೀಜಿ ಸಲಹೆ ನೀಡಿದರು.